ಕೇಜ್ರಿವಾಲ್ ಸುಳ್ಳುಗಾರ ಎಂದ ಶಾಸಕ ಬಿನ್ನಿಗೆ ಆಮ್ ಆದ್ಮಿ ನೋಟಿಸ್

ಬುಧವಾರ, 15 ಜನವರಿ 2014 (19:25 IST)
PR
PR
ನವದೆಹಲಿ: ಆಮ್ ಆದ್ಮಿ ಪಾರ್ಟಿಯಲ್ಲಿ ಅಪಸ್ವರ ಕಂಡುಬಂದಿದ್ದು, ಬಹಿರಂಗವಾಗಿ ಭಿನ್ನಮತ ಸ್ಫೋಟಗೊಂಡಿದೆ. ಆಪ್ ಶಾಸಕ ವಿನೋದ್ ಬಿನ್ನಿ ತಾವು ಲೋಕಸಭೆ ಚುನಾವಣೆಗೆ ಟಿಕೆಟ್ ಕೇಳಿಲ್ಲ. ಕೇಜ್ರಿವಾಲ್ ಒಬ್ಬ ಸುಳ್ಳುಗಾರ ಎಂದು ಹೇಳಿದ್ದಾರೆ. ನಾಳೆ ಸುದ್ದಿಗೋಷ್ಠಿ ನಡೆಸಿ ಎಲ್ಲ ವಿಷಯಗಳನ್ನು ಬಹಿರಂಗ ಪಡಿಸುವುದಾಗಿ ಬಿನ್ನಿ ಹೇಳಿದ್ದಾರೆ. ಆಮ್ ಆದ್ಮಿ ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿದ್ದೇ ಬೇರೆ, ಈಗ ಮಾಡ್ತಿರೋದೇ ಬೇರೆ ಎಂದು ಬಿನ್ನಿ ಆರೋಪಿಸಿದ್ದಾರೆ.ಕೇಜ್ರಿವಾಲ್ ಕಾಂಗ್ರೆಸ್ ಬಗ್ಗೆ ಮೃದುಧೋರಣೆ ತಾಳಿದ್ದಾರೆ. ಈಗ ಕೇಜ್ರಿವಾಲ್ ಭೇಟಿ ಮಾಡುವುದೂ ಕಷ್ಟ. ಮುಖ್ಯಮಂತ್ರಿಯಾದ ಮೇಲೆ ಬದಲಾಗಿದ್ದಾರೆ. ಕೇಜ್ರಿವಾಲ್ ಅವರಿಗೆ ಅಧಿಕಾರದಾಹ ನೆತ್ತಿಗೇರಿದೆ ಎಂದು ಆರೋಪಿಸಿದ್ದಾರೆ.

ಈ ನಡುವೆ ಬಿನ್ನಿಯ ಪಕ್ಷ ವಿರೋಧಿ ಹೇಳಿಕೆ ಹಿನ್ನೆಲೆಯಲ್ಲಿ ಅವರಿಗೆ ಆಮ್ ಆದ್ಮಿ ನೋಟಿಸ್ ನೀಡಿದೆ. ಬಿನ್ನಿ ಇದಕ್ಕೆ ಮುಂಚೆ ಸಚಿವ ಸ್ಥಾನವನ್ನು ಕೇಳಿದ್ದರು. ಆದರೆ ಸಚಿವ ಸ್ಥಾನ ಕೊಟ್ಟಿರಲಿಲ್ಲ. ನಂತರ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ಕೇಳಿದ್ದರಿಂದ ಅದನ್ನೂ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ರೀತಿ ಆರೋಪ ಮಾಡ್ತಿದ್ದಾರೆ ಎಂದು ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ