ಕೇವಲ ಒಬ್ಬ ವ್ಯಕ್ತಿಯಿಂದ ದೇಶ ಮುನ್ನಡೆಸಲು ಸಾಧ್ಯ ಎನ್ನುವ ಭ್ರಮೆಯಲ್ಲಿ ವಿಪಕ್ಷಗಳು: ರಾಹುಲ್

ಶುಕ್ರವಾರ, 27 ಸೆಪ್ಟಂಬರ್ 2013 (12:58 IST)
PTI
ಬುಡಕಟ್ಟು ಸಮುದಾಯ ಮತ್ತು ಬಡವರ ಕೈಗೆ ಅಧಿಕಾರ ನೀಡುವ ಮೂಲಕ ಅಭಿವೃದ್ಧಿ ಪಥದತ್ತ ಸಾಗುವುದು ಕಾಂಗ್ರೆಸ್ ಪಕ್ಷದ ಗುರಿಯಾಗಿದೆ.ವಿಪಕ್ಷಗಳು ಒಬ್ಬ ವ್ಯಕ್ತಿಯಿಂದ ದೇಶವನ್ನೇ ಮುನ್ನಡೆಸುವ ಭ್ರಮೆಯಲ್ಲಿದ್ದಾರೆ ಎಂದು ಕಾಂಗ್ರಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಕಳೆದ ಮೇ 25 ರಂದು ಮಾವೋವಾದಿಗಳ ದಾಳಿಯಲ್ಲಿ ಪ್ರಮುಖ ಕಾಂಗ್ರೆಸ್ ನಾಯಕರು ಹತ್ಯೆಗಿಡಾಗಿದ್ದ ನಂತರ, ಮೊದಲ ಬಾರಿಗೆ ರಾಜ್ಯದ ಎಲ್ಲಾ ಪ್ರಮುಖ ನಾಯಕರು ಪಾಲ್ಗೊಳ್ಳುವ ಸಭೆಯಲ್ಲಿ ಪಾಲ್ಗೊಳ್ಳುವ ಸಭೆಗೆ ರಾಹುಲ್ ಹಾಜರಾಗಿದ್ದಾರೆ.

ದೇಶವನ್ನು ಜನತೆ ಮುನ್ನಡೆಸುತ್ತಾರೆ ಎಂದು ನಾವು ನಂಬಿದ್ದೇವೆ ಎಂದು ಯಾರ ಹೆಸರನ್ನು ಉಲ್ಲೇಖಿಸಿದೇ ವ್ಯಂಗ್ಯವಾಡಿದ ಅವರು, ನನ್ನ ನಂಬಿಕೆಯ ಪ್ರಕಾರ ದೇಶದಲ್ಲಿ ಎರಡು ಬಗೆಯ ಜನರಿರುತ್ತಾರೆ. ಒಬ್ಬರು ಜನತೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹೋರಾಟ ನಡೆಸುತ್ತಾರೆ. ಕೆಲವರು ತಮಗಾಗಿ ಹೋರಾಟ ನಡೆಸುತ್ತಿರುತ್ತಾರೆ ಎಂದು ಲೇವಡಿ ಮಾಡಿದರು.

ಬಸ್ತಾರ್‌ ನಗರದ ಯುವಜನತೆ ಮುಂದೆ ಬಂದು ರಾಜಕೀಯ ವಾಹಿನಿಯಲ್ಲಿ ಮುಂಚೂಣಿಯಲ್ಲಿದ್ದು ಬಡವರ ಮತ್ತು ಬುಡಕಟ್ಟು ಸಮುದಾಯದ ಜನತೆಯ ಏಳಿಗೆಯಲ್ಲಿ ತೊಡಗಿಸಿಕೊಂಡಲ್ಲಿ ಅಂತಹ ಪ್ರಯತ್ನಗಳಿಗೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ