ಕೋಬ್ರಾಪೋಸ್ಟ್ ಕಾರ್ಯಾಚರಣೆ: ಮೋದಿ 'ನಕಲಿ' ಪ್ರಚಾರ ಬಯಲು

ಶನಿವಾರ, 30 ನವೆಂಬರ್ 2013 (20:39 IST)
PR
PR
ಲಕ್ನೋ:ಸುದ್ದಿ ಪೋರ್ಟಲ್ ಕೋಬ್ರಾ ಪೋಸ್ಟ್ ನಡೆಸಿದ ಕುಟುಕು ಕಾರ್ಯಾಚರಣೆ ಆಧಾರದ ಮೇಲೆ ಕೆಲವು ಐಟಿ ಕಂಪೆನಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ. ಚುನಾವಣೆಗಳಿಗೆ ಆನ್‌ಲೈನ್ ಪ್ರಚಾರ ನಡೆಸಲು ಸಾಮಾಜಿತ ಜಾಲ ತಾಣಗಳನ್ನು ಈ ಐಟಿ ಕಂಪೆನಿಗಳು ದುರುಪಯೋಗ ಮಾಡುತ್ತಿವೆ ಎಂದು ಕೋಬ್ರಾಪೋಸ್ಟ್ ಆರೋಪಿಸಿದೆ. ಐಪಿಎಸ್ ಅಧಿಕಾರಿ ಅಮಿತಾಬ್ ಥಾಕುರ್ ಎಫ್‌ಐಆಪ್ ದಾಖಲು ಮಾಡಿದ್ದು, ಎಫ್‌ಐಆರ್‌ನಲ್ಲಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಯ ಮಾಧ್ಯಮ ಪ್ರಚಾರವನ್ನು ನಿರ್ವಹಿಸುತ್ತಿರುವ ಕಂಪೆನಿಗಳನ್ನು ಪ್ರಸ್ತಾಪಿಸಿದೆ.

ಈ ಕಂಪೆನಿಗಳು ನಕಲಿ ವಿವರಗಳನ್ನು ಸೃಷ್ಟಿಸುತ್ತವೆ. ನಕಲಿ ಅಭಿಮಾನಿಗಳು ಮತ್ತು ಸುಳ್ಳು 'ಲೈಕ್ಸ್' ಗಳ ಮೂಲಕ ಮತದಾರರ ಮನಸ್ಸನ್ನು ಸೆಳೆದು, ಎದುರಾಳಿಗಳ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ಬಿತ್ತುತ್ತವೆ ಎಂದು ಅದು ಆಪಾದಿಸಿದೆ.

ಅನೇಕ ಐಟಿ ಕಂಪೆನಿಗಳು ಫೇಸ್‌ಬುಕ್, ಟ್ವಿಟರ್, ಯುಟ್ಯೂಬ್ ಮುಂತಾದ ಸಾಮಾಜಿಕ ತಾಣಗಳನ್ನು ಬಳಸಿಕೊಂಡು ಜನಸಾಮಾನ್ಯರ ಮನಸ್ಸನ್ನು ಕೆಡಿಸಿ ವಂಚನೆ ಮಾಡಿವೆ ಎಂದು ಅವರು ಆಪಾದಿಸಿದ್ದಾರೆ. ರಾಜಕಾರಣಿಗಳ ಜನಪ್ರಿಯತೆಯನ್ನು ಕೃತಕವಾಗಿ ಹೆಚ್ಚಿಸುವ ಮೂಲಕ ಅವರ ಎದುರಾಳಿಗಳ ವರ್ಚಸ್ಸಿಗೆ ಮಸಿ ಬಳಿಯಲು ಸಾಮಾಜಿಕ ತಾಣಗಳನ್ನು ಬಳಸಿಕೊಳ್ಳುತ್ತಿವೆ ಕೋಬ್ರಾಪೋಸ್ಟ್ ತಿಳಿಸಿದೆ.

ವೆಬ್ದುನಿಯಾವನ್ನು ಓದಿ