ಕೋಮುವಾದಿ ಮೋದಿಗೆ ಡಿಎಂಕೆ ಬೆಂಬಲವಿಲ್ಲ: ಕರುಣಾನಿಧಿ

ಶನಿವಾರ, 14 ಸೆಪ್ಟಂಬರ್ 2013 (14:20 IST)
PTI
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಕೆಲವೇ ಕ್ಷಣಗಳಲ್ಲಿ, ಕೋಮುವಾದಿ ಪ್ರಧಾನಿ ಅಭ್ಯರ್ಥಿಗೆ ನಮ್ಮ ಬೆಂಬಲವಿಲ್ಲ ಎಂದು ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ ಹೇಳಿದ್ದಾರೆ.

ಮೋದಿ ಪ್ರಧಾನಿ ಅಭ್ಯರ್ಥಿಯಾಗಿರುವ ಕುರಿತಂತೆ ತಮ್ಮ ಪ್ರತಿಕ್ರಿಯೆ ನೀಡಿ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕರುಣಾನಿಧಿ, ಬಿಜೆಪಿ ಹಿರಿಯ ಮುಖಂಡರಾದ ಆಡ್ವಾಣಿಯವರೇ ಮೋದಿಯನ್ನು ಪಕ್ಷದ ಪ್ರಧಾನಿ ಅಭ್ಯರ್ಥಿಯಾಗುವುದಕ್ಕೆ ವಿರೋಧಿಸಿದ್ದಾರೆ ಮೊದಲ ಮೋದಿ ಬಗ್ಗೆ ಆಡ್ವಾಣಿ ಹೇಳಿಕೆ ಕೇಳಿದ ಬಳಿಕ ನನ್ನ ಪ್ರತಿಕ್ರಿಯೆ ಕೇಳಿ ಎಂದು ತಿರುಗೇಟು ನೀಡಿದರು.

ಕಳೆದ 1999 ಮತ್ತು 2004ರ ಅವಧಿಯಲ್ಲಿ ಡಿಎಂಕೆ ಪಕ್ಷ ಎನ್‌ಡಿಎ ಮೈತ್ರಿಕೂಟದ ಭಾಗವಾಗಿತ್ತು. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಿಂದ ಎನ್‌ಡಿಎ ದೂರವಾಗಿದೆ ಎಂದು ಆರೋಪಿಸಿ ಡಿಎಂಕೆ ಮೈತ್ರಿಯನ್ನು ಕಡಿದುಕೊಂಡಿತ್ತು.

ಗುಜರಾತ್ ದಂಗೆಪೀಡಿತ ಜನತೆಗಾಗಿ ನರೇಂದ್ರ ಮೋದಿ ಯಾವುದೇ ಕಾರ್ಯಕ್ರಮ ರೂಪಿಸುತ್ತಿಲ್ಲ. ದಂಗೆಗೆ ಪರೋಕ್ಷವಾಗಿ ಮೋದಿ ಪ್ರೋತ್ಸಾಹಿಸಿದ್ದರು ಎನ್ನುವ ಉಹಾಪೋಹಗಳು ಕೇಳಿಬಂದಿವೆ. ಇಂತಹ ವ್ಯಕ್ತಿಗೆ ಡಿಎಂಕೆ ಪಕ್ಷ ಯಾವತ್ತು ಬೆಂಬಲ ನೀಡುವುದಿಲ್ಲ ಎಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ