ಕ್ರೇಜಿವಾಲ್‌ಗೆ ಅಣ್ಣಾ ಹಜಾರೆ ವಾರ್ನಿಂಗ್‌

ಮಂಗಳವಾರ, 19 ನವೆಂಬರ್ 2013 (14:00 IST)
PTI
PTI
ನೀವು ಚುನಾವಣೆಯಲ್ಲಿ ಭಾಗಿಯಾಗುವುದರಲ್ಲಿ ನನ್ನ ಅಭ್ಯಂತರ ಇಲ್ಲ. ಆದ್ರೆ ಚುನಾವಣಾ ಪ್ರಚಾರದಲ್ಲಿ ನನ್ನ ಹೆಸರನ್ನು ಬಳಸಿಕೊಳ್ಳಬೇಡಿ. ಚುನಾವಣಾ ಪ್ರಚಾರಕ್ಕಾಗಿ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಬೇಡಿ ಎಂದು ಹೇಳುವ ಮೂಲಕ ಆಮ್‌ ಆದ್ಮಿ ಪಕ್ಷದ ನಾಯಕ ಅರವಿಂದಕ್ರೇಜಿವಾಅವರಿಗೆ ಸಾಮಾಜಿಕ ಕಾರ್ಯಕರ್ಅಣ್ಣಹಜಾರವಾರ್ನಿಂಗ್ ನೀಡಿದ್ದಾರೆ.

ಮುಂಬರಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ದಿಸುತ್ತಿದ್ದು, ಈಗಾಗಲೇ ಬಿರುಸಿನ ಪ್ರಚಾರ ಮಾಡುತ್ತಿದೆ. ಆದ್ರೆ ಈ ಚುನಾವಣಾ ಪ್ರಚಾರದ ವೇಳೆಯಲ್ಲಿ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಬೇಡಿ.. ನನ್ನ ಹೆಸರನ್ನು ಕೇಳಿ ಜನರಿಂದ ಸಿಂಪತಿ ಗಿಟ್ಟಿಸಿಕೊಳ್ಳಬೇಡಿ ಎಂದು ಸಾಮಾಜಿಕ ಕಾರ್ಯಕರ್ಅಣ್ಣಹಜಾರವಾರ್ನಿಂಗ್ ಮಾಡಿದ್ದಾರೆ.

ಅಣ್ಣಹಜಾರಮತ್ತು ಅರವಿಂದ ಕ್ರೇಜಿವಾಲ್‌ಇಬ್ಬರೂ ಈ ಹಿಂದೆ ಭ್ರಷ್ಟಾಚಾರದ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಲೋಕಪಾಲ್ ಮಸೂದೆಯನ್ನಜಾರಿಗೆ ತರಬೇಕು ಎಂದು ಕೇಂದ್ರಕ್ಕೆ ಒತ್ತಾಯ ಮಾಡಿದ್ರು. ಅದ್ರೆ ಕೆಂದ್ರ ಸರ್ಕಾರ ಇದಕ್ಕೆ ಸೂಕ್ತವಾಗಿ ಸ್ಪಂದಿಸದ ಕಾರಣ ಅರವಿಂದಕ್ರೆಜಿವಾಅವರು ಆಮ್‌ ಆದ್ಮಿ ಪಕ್ಷವನ್ನಸ್ಥಾಪಿಸಿದ್ದರು. ರಾಜಕಾರಣಕ್ಕೆ ಎಂಟ್ರಿಯಾಗಿ ಭ್ರಷ್ಟ ಸಕಾರವನ್ನು ಕಿತ್ತೊಗೆದು ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ರಚಿಸುವ ಮಹದಾಸೆಯನ್ನು ಹೊಂದಿದ್ದರು.

ಆದ್ರೆ ರಾಜಕೀಯ ನಮ್ಮ ಗುರಿಯಲ್ಲ. ಜನಲೋಕಪಾಲ ಬರುವುದೊಂದೆ ನಮ್ಮ ಗುರಿ ಎಂದು ಅರವಿಂದ್‌ ಕ್ರೇಜಿವಾಲ ಅವರಿಗೆ ಬುದ್ದಿ ಹೇಳಿದ ಅಣ್ಣಹಜಾರೆ, ಪಕ್ಷ ಸ್ಥಾಪಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅರವಿಂದ ಕ್ರೇಜಿವಾಲ ಪಕ್ಷವನ್ನು ಸ್ಥಾಪನೆ ಮಾಡಿಯೇ ಬಿಟ್ಟರು. ಇದೀಗ ದೆಹಲಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ದಿಸುತ್ತಿದೆ. ಹೀಗಾಗಿ ಕ್ರೇಜಿವಾಲ ಅವರು ಭರ್ಜರಿ ಪ್ರಚಾರ ಕೂಡ ಮಾಡ್ತಿದ್ದಾರೆ. ಹೀಗಾಗಿ ಚುನಾವಣಾ ಪ್ರಚಾರದಲ್ಲಿ ಯಾವುದೇ ರೀತಿಯಲ್ಲೂ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಬೇಡಿ ಎಂದಅಣ್ಣಹಜಾರಖಡಕ್ ವಾರ್ನಿಂಗ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ