ಗಣಿಯ ಮೇಲ್ಛಾವಣಿ ಕುಸಿತ : 4 ಸಾವು, ಅವಶೇಷಗಳ ಅಡಿಯಲ್ಲಿ 50 ಜನ.

ಸೋಮವಾರ, 11 ನವೆಂಬರ್ 2013 (16:22 IST)
PTI
PTI
ಧನ್‌ಬಾದ್‌ ಪ್ರದೇಶದ ಬಸಂತಿಮಠ ಕೊಲೆರಿಯಲ್ಲಿ ನಡೆಯುತ್ತಿದ್ದ ಗಣಿ ಕಾಮಗಾರಿಯ ಸಮಯದಲ್ಲಿ, ಗಣಿಯ ಮೇಲ್ಛಾವಣಿ ಕುಸಿದ ಪರಿಣಾಮವಾಗಿ 4 ಜನರು ಸಾವಿಗೀಡಾಗಿದ್ದು, 50 ಕ್ಕೂ ಹೆಚ್ಚು ಕಾರ್ಮಿಕರು ಮಣ್ಣಿನಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ.

ಜಾರ್ಖಂಡ್‌ ರಾಜ್ಯದ ಧನ್‌ಬಾದ್‌ ಪ್ರದೇಶದಲ್ಲಿ ಕಲ್ಲಿದ್ದಲು ಅತಿ ಹೆಚ್ಚು ಸಿಗುತ್ತದೆ. ಹೀಗಾಗಿ ಇಲ್ಲಿ ಕಲ್ಲಿದ್ದಲು ಗಣಿಗಾರಿಕೆ ಹೆಚ್ಚಾಗಿ ನಡೆಯುತ್ತಿರುತ್ತದೆ. ಭಾರತ್‌ ಕೋಕಿಂಗ್‌ ಕೋಲ್‌ ಲಿಮಿಟೆಡ್‌ ಸಂಸ್ಥೆಯು ಇಲ್ಲಿ ಗಣಿಗಾರಿಕೆ ನಡೆಸುತ್ತಿತ್ತು. ಆದ್ರೆ ಅಕಸ್ಮಾತಾಗಿ ಸಂಭವಿಸಿದ ಅನಾಹುತದಿಂದಾಗಿ ಗಣಿಯ ಮೇಲ್ಛಾವಣಿ ಕುಸಿದುಬಿದ್ದಿದೆ. ಹೀಗಾಗಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಸಾವಿಗೀಡಾಗಿದ್ದಾರೆ ಮತ್ತು ಇನ್ನು 50 ಕ್ಕೂ ಹೆಚ್ಚು ಜನರು ಗಣಿ ಮಣ್ಣಿನೊಳಗೆ ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯಭರದಿಂದ ಸಾಗುತ್ತಿದೆ.

ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಮಿಕರನ್ನು ರಕ್ಷಿಸುವ ಕಾರ್ಯದಲ್ಲಿ ಮಗ್ನವಾಗಿದೆ.

ವೆಬ್ದುನಿಯಾವನ್ನು ಓದಿ