ಗಣೇಶ ಹಾಲು ಕುಡಿದಿದ್ದಾನೆ ಎಂದು ದೇಶಾದ್ಯಂತ ಉಹಾಪೋಹ ಹರಡಿಸಿದಂತ ಪಕ್ಷ ಬಿಜೆಪಿ : ನಿತೀಶ್

ಗುರುವಾರ, 28 ನವೆಂಬರ್ 2013 (13:29 IST)
PTI
ರಾಜ್ಯದಲ್ಲಿ ಉಪ್ಪು ಕೊರತೆಯ ಆತಂಕ ಹುಟ್ಟಿಸಿ ಜನತೆಯನ್ನು ಬಿಜೆಪಿಯತ್ತ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಇಂತಹ ಕೃತ್ಯಗಳಿಗೆ ಜನತೆ ಬೆಂಬಲಿಸುವುದಿಲ್ಲ. ಗಣೇಶನಿಗೆ ಹಾಲು ಕುಡಿಸಿದಂತಹ ಪಕ್ಷದಿಂದ ಕಲಿಯುವು ಅಗತ್ಯವಿಲ್ಲ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಿಡಿಕಾರಿದ್ದಾರೆ.

ಗಣೇಶ ದೇವರು ಹಾಲು ಕುಡಿಯುತ್ತಿದ್ದಾನೆ ಎಂದು ದೇಶಾದ್ಯಂತ ಉಹಾಪೋಹಗಳನ್ನು ಹರಡಿಸಿ ಅದರ ಪ್ರಭಾವ ಪರೀಕ್ಷಿಸಿದ್ದ ಬಿಜೆಪಿ, ಇದೀಗ ಅದೇ ತಂತ್ರವನ್ನು ಬಳಸಿ ಚುನಾವಣೆಯಲ್ಲಿ ಮತದಾರರನ್ನು ವಂಚಿಸುವ ತಂತ್ರ ನಡೆಸಿದೆ ಎಂದು ಆರೋಪಿಸಿದ್ದಾರೆ.

ಸಾಮಾಜಿಕ ಅಂತರ್ಜಾಲ ತಾಣದ ನೆರವು ಪಡೆದು ರಾಜ್ಯದಲ್ಲಿ ಉಪ್ಪಿನ ಕೊರತೆಯಾಗಿದೆ ಎನ್ನುವ ಆತಂಕ ಹುಟ್ಟಿಸಿ ಉಪ್ಪು ಖರೀದಿಗಾಗಿ ಜನತೆ ಮುಗಿಬೀಳುವಂತೆ ಮಾಡಿತ್ತು. ಆದರೆ, ಬಿಜೆಪಿ ತಂತ್ರವನ್ನು ಅರಿತ ಸರಕಾರ ಕೇವಲ ಎರಡು ಗಂಟೆಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿತ್ತು ಎಂದರು.

ಬಿಹಾರ್ ಬಿಜೆಪಿ ಮುಖಂಡರಾದ ಸುಶೀಲ್ ಮೋದಿ ಬಿಜೆಪಿ ಅಭ್ಯರ್ಥಿಯಾದ ನರೇಂದ್ರ ಮೋದಿಯನ್ನು ಹಿಂದಕ್ಕೆ ತಳ್ಳಿ ಪ್ರಮುಖ ರಾಜಕಾರಣಿಯಾಗಲು ಹಾಜಿಪುರದಲ್ಲಿರುವ ಪಾಟ್ನಾ ಸ್ಫೋಟದಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿದ್ದರು ಎಂದು ಲೇವಡಿ ಮಾಡಿದರು.

ಪಾಟ್ನಾ ಸ್ಫೋಟದಿಂದ ಗಾಯಗೊಂಡವರಿಗೆ ನಿಜವಾದ ಸಾಂತ್ವನ ಹೇಳುವ ಬಯಕೆ ಹೊಂದಿಲ್ಲ. ಕೇವಲ ಮಾಧ್ಯಮಗಳ ಗಮನ ಸೆಳೆಯಲು ಹೂಡಿದ ತಂತ್ರ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಟೀಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ