ಗುಜರಾತಿನಲ್ಲಿ ರಾಜ್ಯಪಾಲರಿಗೆ ಕಿಮ್ಮತ್ತಿಲ್ಲ, ಮೋದಿಯದ್ದೇ ದರ್ಬಾರ್

ಮಂಗಳವಾರ, 1 ಅಕ್ಟೋಬರ್ 2013 (21:44 IST)
PR
PR
ಅಹ್ಮದಾಬಾದ್: ರಾಜ್ಯಪಾಲರು ಅನುಮೋದಿಸದೇ ವಾಪಸು ಕಳಿಸಿದ ಲೋಕಾಯುಕ್ತ ತಿದ್ದುಪಡಿ ಮಸೂದೆಯನ್ನು ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಯಾವುದೇ ವಿರೋಧವಿಲ್ಲದೇ ಅಂಗೀಕಾರ ಪಡೆದಿದ್ದಾರೆ. ಮಸೂದೆಯ ಪ್ರಕಾರ ನರೇಂದ್ರ ಮೋದಿ ನೇತೃತ್ವದ ಆರು ಜನರ ಸಮಿತಿ ಲೋಕಾಯುಕ್ತರನ್ನು ನೇಮಕ ಮಾಡುತ್ತದೆ.. ಈ ಸಮಿತಿ ಮತ್ತು ಲೋಕಾಯುಕ್ತರ ಮೇಲೆ ರಾಜ್ಯಪಾಲರಿಗೆ ಯಾವುದೇ ಅಧಿಕಾರವಿರುವುದಿಲ್ಲ.

ಸಿಎಂ ಮೋದಿ ಹೇಳಿದವರಿಗೆ ಲೋಕಾಯುಕ್ತ ಪಟ್ಟ ಸಿಗಲಿದೆ. ಲೋಕಾಯುಕ್ತ ತನಿಖಾ ವರದಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸುವಂತಿಲ್ಲ. ಲೋಕಾಯುಕ್ತಕ್ಕೆ ಸುಳ್ಳು ದೂರು ನೀಡಿದವರಿಗೆ 6 ತಿಂಗಳ ಕಠಿಣ ಶಿಕ್ಷೆ ನೀಡಲಾಗುತ್ತದೆ. ಎರಡನೇ ಬಾರಿ ರಾಜ್ಯಪಾಲರಿಗೆ ಈ ಮಸೂದೆಯನ್ನು ಪುನಃ ಕಳಿಸುವುದರಿಂದ ಅದನ್ನು ಅಂಗೀಕರಿಸಲೇಬೇಕಾದ ಅನಿವಾರ್ಯತೆ ಉಂಟಾಗಿದೆ.

ವೆಬ್ದುನಿಯಾವನ್ನು ಓದಿ