ಗುಜರಾತ್ ದಂಗೆಯ ನಂತ್ರ ಎಷ್ಟು ಕುಟುಂಬಗಳನ್ನು ಭೇಟಿ ಮಾಡಿದ್ರಿ ಮೋದಿಯವ್ರೆ: ನಿತೀಶ್

ಸೋಮವಾರ, 11 ನವೆಂಬರ್ 2013 (17:49 IST)
PTI
ನಗರದಲ್ಲಿ ನಡೆದ ಸ್ಫೋಟಗಳಲ್ಲಿ ಮೃತರಾದವರ ಮನೆಗಳಿಗೆ ಭೇಟಿ ನೀಡಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, 2002ರಲ್ಲಿ ಗುಜರಾತ್ ದಂಗೆಯ ನಂತರ ಎಷ್ಟು ಕುಟುಂಬಗಳನ್ನು ಭೇಟಿ ಮಾಡಿದ್ದಾರೆ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಶ್ನಿಸಿದ್ದಾರೆ.

ಬಿಜೆಪಿ ಪಕ್ಷದ ಮುಖಂಡರು ಸುಳ್ಳು ಕಥೆಗಳನ್ನು ಹೆಣೆಯುವದರಲ್ಲಿ ನಿಸ್ಸಿಮರು ಎಂದು ಕುಮಾರ್ ಕಿಡಿಕಾರಿದ್ದಾರೆ.

ಕಳೆದ ತಿಂಗಳು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ಸಾರ್ವಜನಿಕ ಸಭೆಯಲ್ಲಿ ನಡೆದ ಬಾಂಬ್‌ಸ್ಫೋಟದಲ್ಲಿ ಮೃತರಾದವರ ಬಗ್ಗೆ ಕನಿಷ್ಛ ಸೌಜನ್ಯ ತೋರಿಲ್ಲ ಎನ್ನುವ ಬಿಜೆಪಿ ಹೇಳಿಕೆಗೆ ನಿತೀಶ್ ತಿರುಗೇಟು ನೀಡಿದ್ದಾರೆ.

ಸರಣಿ ಬಾಂಬ್ ಸ್ಫೋಟಿಸಿದ್ದರೂ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತೋಷದಿಂದ ಭೋಜನ ಸವಿಯುತ್ತಿದ್ದರು. ನಿತೀಶ್ ಪ್ರಜಾಪ್ರಭುತ್ವದ ವಿರೋಧಿ ಎಂದು ಮೋದಿ ಟೀಕಿಸಿದ್ದರು.

ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಜೆಪಿ ಘೋಷಿಸಿದ್ದರಿಂದ ಜೆಡಿಯು ಪಕ್ಷ ಮಿತ್ರಪಕ್ಷವಾದ ಬಿಜೆಪಿಯೊಂದಿಗಿನ 17 ವರ್ಷದ ಮೈತ್ರಿಯನ್ನು ಕಡಿದುಕೊಂಡಿತ್ತು.

ವೆಬ್ದುನಿಯಾವನ್ನು ಓದಿ