ಗುಜರಾತ್ ಮಹಿಳೆಯ ಗೂಢಾಚಾರಿಕೆ; ಮೋದಿ ವಿರುದ್ಧ ಸಿಬಿಐ ತನಿಖೆಗೆ ಕೇಂದ್ರ ಆದೇಶ

ಸೋಮವಾರ, 2 ಡಿಸೆಂಬರ್ 2013 (15:26 IST)
PTI
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಟ್ಟಾ ಬೆಂಬಲಿಗ ಅಮಿತ್ ಶಾ ಸರಕಾರಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಬೆಂಗಳೂರು ಮೂಲದ ಮಹಿಳೆಯ ಗೂಢಾಚಾರಿಕೆ ನಡೆಸಿದ ಪ್ರಕರಣದ ತನಿಖೆ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.

ಬೆಂಗಳೂರು ಮೂಲದ ಮಹಿಳೆ ರಾಜ್ಯದಿಂದ ಹೊರಗಡೆಯಿರುವಾಗ ಕೇಂದ್ರದ ಅನುಮತಿಯಿಲ್ಲದೇ ಗುಜರಾತಿನ ಪೊಲೀಸರು ಆಕೆಯ ಫೋನ್‌ ಕರೆಗಳನ್ನು ಕದ್ದಾಲಿಸಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸಿಬಿಐ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ನಡೆಸಿ ವರದಿ ಸಲ್ಲಿಸಿದ ನಂತರ ಸರಕಾರಿ ಅಡಳಿತವನ್ನು ದುರ್ಬಳಕೆ ಮಾಡಿಕೊಂಡಿದ್ದಲ್ಲಿ ಮೋದಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಕೇಂದ್ರ ಮತ್ತು ರಾಜ್ಯ ಗೃ ಸಚಿವಾಲಯದ ಕಾರ್ಯದರ್ಶಿಗಳು ಕಾನೂನುಬಾಹಿರ ಗೂಢಾಚಾರಿಕೆ ಪ್ರಕರಣದ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಒಬ್ಬ ವ್ಯಕ್ತಿ ರಾಜ್ಯದೊಳಗಡೆ ಇದ್ದಲ್ಲಿ ರಾಜ್ಯದ ಗೃಹ ಕಾರ್ಯದರ್ಶಿಗಳು ಆತನ ಫೋನ್ ಕರೆಗಳನ್ನು ಕದ್ದಾಲಿಸಲು ಆದೇಶಿಸಬಹುದು. ಆದರೆ, ಆ ವ್ಯಕ್ತಿ ಒಂದು ವೇಳೆ ಹೊರರಾಜ್ಯದಲ್ಲಿದ್ದಲ್ಲಿ ಕೇಂದ್ರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ವೆಬ್ದುನಿಯಾವನ್ನು ಓದಿ