ಗ್ಯಾಂಗ್ ರೇಪ್ ಮಾಡಿ ಸ್ಕ್ರೂಡ್ರೈವರ್‌ನಿಂದ ಕಣ್ಣು ಕಿತ್ತ ಮೂವರಿಗೆ ಮರಣದಂಡನೆ

ಬುಧವಾರ, 19 ಫೆಬ್ರವರಿ 2014 (17:39 IST)
PR
PR
ನವದೆಹಲಿ: ದೆಹಲಿಯಲ್ಲಿ 19 ವರ್ಷ ವಯಸ್ಸಿನ ಬಾಲಕಿ ಮೇಲೆ ಗ್ಯಾಂಗ್ ರೇಪ್ ಮಾಡಿ ಅವಳ ಮೈಮೇಲೆ ಆಸಿಡ್ ಎರಚಿ ನಂತರ ಸ್ಕ್ರೂಡ್ರೈವರ್‌ನಿಂದ ಬಾಲಕಿಯ ಕಣ್ಣುಗಳನ್ನು ಕಿತ್ತು ಪೈಶಾಚಿಕ ಕೃತ್ಯವೆಸಗಿದ ಮೂವರಿಗೆ ನಗರದ ಕೋರ್ಟ್‌ ಮರಣದಂಡನೆ ಶಿಕ್ಷೆ ವಿಧಿಸಿದೆ. ಪ್ರಾಪ್ತ ವಯಸ್ಕ ಬಾಲಕಿಯ ನಜ್ಜುಗುಜ್ಜಾದ ಕೊಳೆತ ಶವ ಹರ್ಯಾಣದ ಗ್ರಾಮದಲ್ಲಿ ಪತ್ತೆಯಾಗಿತ್ತು. ಗುರಗಾಂವ್ ಬಳಿಯ ಕಚೇರಿಯಿಂದ ಮನೆಗೆ ಹೋಗುತ್ತಿದ್ದ ಬಾಲಕಿಯನ್ನು ಅಪಹರಿಸಿ ನಂತರ ಗ್ಯಾಂಗ್ ರೇಪ್ ಮಾಡಲಾಗಿತ್ತು. ಅವಳ ಮೃತದೇಹದಲ್ಲಿ ಸಿಗರೇಟಿನಿಂದ ಸುಟ್ಟ ಗುರುತುಗಳು ಇದ್ದವು.

ದುಷ್ಕರ್ಮಿಗಳು ಅವಳ ಮೇಲೆ ಪುನಃ ಪುನಃ ರೇಪ್ ಮಾಡಿ ಮೂರು ದಿನಗಳ ಕಾಲ ಪೈಶಾಚಿಕ ಕೃತ್ಯವೆಸಗಿದರು. ಆರೋಪಿಗಳಲ್ಲಿ ಇಬ್ಬರು ಸೋದರರಾಗಿದ್ದಾರೆ. ತಮ್ಮ ಲೈಂಗಿಕ ಬಯಕೆಯನ್ನು ಬಾಲಕಿ ನಿರಾಕರಿಸಿದ್ದಾಗ ಈ ದುಷ್ಕರ್ಮಿಗಳು ಈ ರೀತಿ ಸೇಡುತೀರಿಸಿಕೊಂಡರು.ಇವರ ಅಪರಾಧ ಅಪರೂಪದಲ್ಲಿ ಅಪರೂಪ ಪ್ರಕರಣವಾದ್ದರಿಂದ ರೇಪಿಸ್ಟ್‌ಗಳಿಗೆ ಮರಣದಂಡನೆ ವಿಧಿಸಿದರು.ಡಾಟಾ ಎಂಟ್ರಿ ಆಪರೇಟರ್ ಕೆಲಸ ಮಾಡುತ್ತಿದ್ದ ಬಾಲಕಿ ದೆಹಲಿಯ ಕುತುಬ್ ವಿಹಾರ್ ಪ್ರದೇಶದಲ್ಲಿನ ಅವಳ ಮನೆಯ ಬಳಿ ಅಪಹರಿಸಿ ನಿರಂತರ ರೇಪ್ ಮಾಡಿ ಚಿತ್ರಹಿಂಸೆ ನೀಡಿದ್ದರಿಂದ 2012ರ ಫೆ.9ರಂದು ನಿಧನಳಾಗಿದ್ದಳು.

ವೆಬ್ದುನಿಯಾವನ್ನು ಓದಿ