ಚಂಚಲಗುಡ ಜೈಲಿನಿಂದ ಜಗನ್ ಬಿಡುಗಡೆ: ಅಭಿಮಾನಿಗಳ ಸಂಭ್ರಮ, ಸಡಗರ

ಮಂಗಳವಾರ, 24 ಸೆಪ್ಟಂಬರ್ 2013 (21:15 IST)
PR
PR
ಹೈದರಾಬಾದ್: ಕಡಪ ಸಂಸದ ಜಗನ್‌ಮೋಹನ್ ರೆಡ್ಡಿ ಇಂದು ಮಧ್ಯಾಹ್ನ 4 ಗಂಟೆ ಸುಮಾರಿಗೆ ಹೈದರಾಬಾದ್ ಚಂಚಲಗುಡ ಜೈಲಿನಿಂದ ಬಿಡುಗಡೆಯಾದರು. ಹೈದರಾಬಾದ್ ಸಿಬಿಐ ವಿಶೇಷ ಕೋರ್ಟ್ ನಿನ್ನೆ ಸಂಜೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಇಂದು ಜಗನ್ ಪರ ವಕೀಲರು ನ್ಯಾಯಾಲಯದ ಷರತ್ತುಗಳನ್ನು ಪೂರೈಸಿದರು. ಇದನ್ನು ಪರಿಶೀಲಿಸಿದ ಬಳಿಕ ಜಗನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿದ್ದರಿಂದ ಅವರ 482 ದಿನಗಳ ಜೈಲುವಾಸಕ್ಕೆ ಮುಕ್ತಿ ಸಿಕ್ಕಿತು. ಜಗನ್ ಜಾಮೀನು ಕೋರಿ ಸುಪ್ರೀಂಕೋರ್ಟ್‌ವರೆಗೂ ಹೋಗಿ ಬಂದಿದ್ದರು.

ಲೋಕಸಭೆ ಚುನಾವಣೆ ಕೆಲವೇ ತಿಂಗಳು ಇರುವಾಗಲೇ ಜಗನ್ ರಿಲೀಸ್ ಆಗಿದೆ. ಇಂದು ಜಗನ್ ಬಿಡುಗಡೆಯಾಗುತ್ತಾರೆಂಬ ನಿರೀಕ್ಷೆಯಲ್ಲಿ ಸಾವಿರ, ಸಾವಿರ ವೈಎಸ್‌ಆರ್ ಕಾಂಗ್ರೆಸ್ ಕಾರ್ಯಕರ್ತರು ಜೈಲಿನತ್ತ ಮುಖ ಮಾಡಿದ್ದರು. ಜಗನ್ ಅವರನ್ನು ಬರಮಾಡಿಕೊಳ್ಳಲು ಜೈಲಿನ ಬಳಿ ಜಮಾಯಿಸಿದರು. ಜಗನ್ ಜೈಲಿನಿಂದ ಹೊರಬರುತ್ತಿದ್ದಂತೆ ಜಗನ್‌ಗೆ ಜೈಕಾರ ಹಾಕಿದರು. ಅಭಿಮಾನಿಗಳ ಹರ್ಷೋದ್ಗಾರ ಮುಗಿಲುಮುಟ್ಟಿತು.ಸಾವಿರಾರು ಬೆಂಬಲಿಗರಿಂದ ಅಭಿಮಾನಿಗಳಿಗೆ ಸ್ವಾಗತ. ಜಗನ್ ಚಂಚಲಗುಡದಿಂದ ಬಂಜಾರಾ ಹಿಲ್ಸ್‌ನಲ್ಲಿರುವ ಮನೆಗೆ ತೆರಳಿದರು. ಜಗನ್‌ಗೆ ಚಂಚಲಗುಡದಿಂದ ಮನೆಗೆ ತೆರಳಲು ಸುಮಾರು ಎರಡೂವರೆ ಗಂಟೆ ಹಿಡಿಯಿತು. ಜಗನ್ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮ, ಸಡಗರದಲ್ಲಿ ತೊಡಗಿದರು.

ವೆಬ್ದುನಿಯಾವನ್ನು ಓದಿ