ಚಲಿಸುತ್ತಿರುವ ಕಾರಿನಲ್ಲಿ ಯುವತಿಯ ಮೇಲೆ ಅತ್ಯಾಚಾರ

ಬುಧವಾರ, 2 ಏಪ್ರಿಲ್ 2014 (15:04 IST)
ದೆಹಲಿಯ ಹತ್ತಿರದಲ್ಲಿರುವ ಗಾಜಿಯಾಬಾದ್‌ನಲ್ಲಿ ನಾಲ್ವರು ಯುವಕರು ಯುವತಿಯನ್ನು ಅಪಹರಿಸಿ ಕಾರಿನಲ್ಲಿಯೇ ಅತ್ಯಾಚಾರವೆಸಗಿದ ದಾರುಣ ಘಟನೆ ವರದಿಯಾಗಿದೆ.

ಸಾಹಿಬಾಬಾದ್‌ನಲ್ಲಿರುವ ದೇವಾಲಯದಿಂದ ನಿನ್ನ ಸಂಜೆ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಅತ್ಯಾಚಾರಕ್ಕೊಳಗಾದ ಯುವತಿಯ ಪ್ರಕಾರ, ನಾಲ್ಕು ಮಂದಿ ಆರೋಪಿಗಳು ನನ್ನನ್ನು ಕಾರಿನಲ್ಲಿ ಎಳೆದುಕೊಂಡು ಹೋಗಿ, ನಂತರ 20 ಕಿ.ಮೀ ದೂರದಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ ಎಂದು ಮಾಹಿತಿ ನೀಡಿದ್ದಾಳೆ.

ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ