ಚಿಲ್ಲರೆವಲಯದಲ್ಲಿ ಎಫ್‌ಡಿಐ ರದ್ದು ಮಾಡಿದ ಆಮ್ ಆದ್ಮಿ

ಸೋಮವಾರ, 13 ಜನವರಿ 2014 (17:09 IST)
PR
PR
ನವದೆಹಲಿ: ದೆಹಲಿ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸುತ್ತಿದೆ. ಉಚಿತ ನೀರು, ವಿದ್ಯುತ್‌ ದರದಲ್ಲಿ ಶೇ. 50 ಕಡಿತದೊಂದಿಗೆ ಪ್ರಣಾಳಿಕೆಯಲ್ಲಿ ನೀಡಿದ್ದ ಇನ್ನೊಂದು ಭರವಸೆ ಈಡೇರಿಸುತ್ತಿದೆ. ಅದು ಬಹುಬ್ರಾಂಡ್ ಚಿಲ್ಲರೆವಲಯದಲ್ಲಿ ವಿದೇಶಿ ನೇರ ಹೂಡಿಕೆಯ ಅನುಮತಿಯನ್ನು ಹಿಂದಕ್ಕೆ ಪಡೆದು ಹೀಗೆ ಮಾಡಿದ ಪ್ರಥಮ ರಾಜ್ಯವೆನಿಸಿತು. ಪ್ರಣಾಳಿಕೆಯಲ್ಲಿ ಚಿಲ್ಲರೆ ವಲಯದಲ್ಲಿ ವಿದೇಶಿ ನೇರ ಹೂಡಿಕೆಯನ್ನು ರದ್ದುಮಾಡುವುದಾಗಿ ಆಮ್ ಆದ್ಮಿ ಭರವಸೆ ನೀಡಿತ್ತು.

ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ ಸರ್ಕಾರ ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆಗೆ ಪತ್ರ ಬರೆದಿದ್ದು, ಎಫ್‌ಡಿಐ ನೆರವಿನ ಮಳಿಗೆಗಳಿಗೆ ಅವಕಾಶ ನೀಡಬೇಡಿ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ