ಚುನಾವಣೆಗೆ ಮುಹೂರ್ತ ಫಿಕ್ಸ್: ಕರ್ನಾಟಕದಲ್ಲಿ ಏಪ್ರಿಲ್ 17ರಂದು ಮತದಾನ

ಬುಧವಾರ, 5 ಮಾರ್ಚ್ 2014 (11:10 IST)
PR
PR
ನವದೆಹಲಿ: 16ನೇ ಲೋಕಸಭೆ ಚುನಾವಣೆಗೆ ದಿನಾಂಕವನ್ನು ಪ್ರಕಟಿಸುವುದಕ್ಕಾಗಿ ಮುಖ್ಯಚುನಾವಣೆ ಆಯುಕ್ತ ವಿ.ಎಸ್. ಸಂಪತ್ ದೆಹಲಿಯ ವಿಜ್ಞಾನಭವನದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಒಟ್ಟು 9 ಹಂತಗಳಲ್ಲಿ ಮತದಾನ ನಡೆಯಲಿದ್ದು, ಏಪ್ರಿಲ್ 7ರಂದು ಮೊದಲ ಹಂತದ ಮತದಾನ ನಡೆಸುವುದಾಗಿ ಅವರು ಪ್ರಕಟಿಸಿದರು. ಏಪ್ರಿಲ್ 9ರಂದು 2ನೇ ಹಂತದ ಮತದಾನ ನಡೆಸಲಾಗುತ್ತದೆ. ಏಪ್ರಿಲ್ 10ಕ್ಕೆ ಮೂರನೇ ಹಂತದ ಮತದಾನ ನಡೆಸಲಾಗುತ್ತದೆ. ಏಪ್ರಿಲ್ 12ರಂದು ನಾಲ್ಕನೇ ಹಂತದ ಮತದಾನ ನಡೆಯಲಿದೆ.

ದೇಶಾದ್ಯಂತ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗುತ್ತದೆ. ಮತ ಎಣಿಕೆಯನ್ನು ಮೇ 16ರಂದು ಕೈಗೊಳ್ಳಲಾಗುತ್ತದೆ ಮತ್ತು ಅದೇ ದಿನ ಫಲಿತಾಂಶ ಪ್ರಕಟವಾಗುತ್ತದೆ. 15ನೇ ಲೋಕಸಭೆಯ ಅವಧಿ ಮೇ 31ರಂದು ಕೊನೆಗೊಳ್ಳಲಿದೆ. 543 ಲೋಕಸಭೆ ಕ್ಷೇತ್ರಗಳಿಗೆ ಎರಡು ತಿಂಗಳ ಅವಧಿಯಲ್ಲಿ ಚುನಾವಣೆ ನಡೆಸಲಾಗುತ್ತದೆ. ಈ ಬಾರಿ 81.4 ಕೋಟಿ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ. ಆಯುಕ್ತರಾದ ಎಚ್.ಎಸ್. ಬ್ರಹ್ಮ ಮತ್ತು ಎಸ್.ಎನ್.ಎ. ಜೈದಿ ಕೂಡ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

PR
PR
ಲೋಕಸಭೆ ಚುನಾವಣೆ ಜತೆಗೆ ಆಂಧ್ರಪ್ರದೇಶ, ಸಿಕ್ಕಿಂ, ಒಡಿಶಾಗೆ ವಿಧಾನಸಭೆ ಚುನಾವಣೆಗಳನ್ನು ಕೂಡ ನಡೆಸಲಾಗುತ್ತದೆ ಎಂದು ಸಂಪತ್ ಹೇಳಿದರು. ಮತದಾರರ ಪಟ್ಟಿಗೆ ಈ ಬಾರಿ 9.71 ಕೋಟಿ ಜನರು ಹೊಸದಾಗಿ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು. ಪರೀಕ್ಷೆ ವೇಳಾಪಟ್ಟಿಯನ್ನು ಪರಿಗಣಿಸಿ ಚುನಾವಣೆ ವೇಳಾಪಟ್ಟಿ ನಿಗದಿಪಡಿಸಲಾಗಿದೆ ಎಂದೂ ಅವರು ಹೇಳಿದರು.

ಶೇ. 12ರಷ್ಟು ಮತದಾನ ಕೇಂದ್ರಗಳನ್ನು ಹೆಚ್ಚಿಸಲಾಗುವುದು ಎಂದು ಅವರು ಹೇಳಿದರು. ಈ ಬಾರಿ ಅಭ್ಯರ್ಥಿಯನ್ನು ತಿರಸ್ಕರಿಸುವ ಅವಕಾಶವಿದೆ.
ಕರ್ನಾಟಕದಲ್ಲಿ 17ನೇ ಏಪ್ರಿಲ್‌ನಂದು ಮತದಾನ ನಡೆಯಲಿದೆ. ಕರ್ನಾಟಕದಲ್ಲಿ ಒಂದೇ ಹಂತದ ಮತದಾನ ನಡೆಯಲಿದೆ.

ವೆಬ್ದುನಿಯಾವನ್ನು ಓದಿ