ಜಗತ್ತಿನ ಗಮನ ಸೆಳೆದ ಮೋದಿಯ ಸಂಪೂರ್ಣ ಭಾಷಣ ಇಲ್ಲಿದೆ ನೋಡಿ.

ಭಾನುವಾರ, 29 ಸೆಪ್ಟಂಬರ್ 2013 (18:50 IST)
ಶೇಖರ್‌ ಪೂಜಾರಿ :

ನವದೆಹಲಿಯಲ್ಲಿ ಇಂದು ಜನಸಾಗರ ನೆರೆದಿತ್ತು. ದೆಹಲಿಯ ಜಪಾನೀಸ್‌ ಮೈದಾನದಲ್ಲಿ ಮೋದಿ ಭಾಷಣಕ್ಕಾಗಿ ಎಲ್ಲಾ ತಯಾರಿ ಮಾಡಲಾಗಿತ್ತು. ಬಿಜೆಪಿಯ ನಾಯಕರಾದ ರಾಜನಾಥ್‌ ಸಿಂಗ್‌, ನಿತಿನ್‌ ಗಡ್ಕರಿ, ನವಜೋದ್‌ ಸಿಂಗ್‌ ಸಿದ್ದು ಮೊದಲಾದವರು ಹಾಜರಿದ್ದರು. ಆದ್ರೆ ಈ ಬೃಹತ್‌ ಐತಿಹಾಸಿಕ ರ‍್ಯಾಲಿಗೆ ಬಿಜೆಪಿಯ ವರಿಷ್ಟರಾದ ಎಲ್‌ಕೆ ಅಡ್ವಾಣಿ ಮತ್ತು ಸುಷ್ಮಾ ಸ್ವರಾಜ್‌ ಗೈರು ಹಾಜರಾಗಿದ್ದರು. ಈ ಮೂಲಕ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಜನತೆಗೆ ಗೊತ್ತಾಗಿದೆ. ಬಿಜೆಪಿಯಲ್ಲಿನ ಅಸಮಾಧಾನದ ಹೊಗೆ ಇಂದಿನ ಐತಿಹಾಸಿಕ ರ‍್ಯಾಲಿಯಲ್ಲಿ ಎದ್ದು ಕಾಣುತ್ತಿತ್ತು.

ಭಾಷಣದ ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ...

PTI
PTI



ಮೊದಲಿಗೆ ಮಾತನಾಡಿದ ನವಜೋದ್‌ ಸಿಂಗ್‌ ಸಿದ್ದು ಪ್ರಧಾನಿ ವಿರುದ್ಧ ಹರಿ ಹಾಯ್ದರು. ಪ್ರಧಾನಿ ಮನಮೋಹನ್‌ ಸಿಂಗ್‌ ಸರ್ದಾರ್ಜಿಯೇ ಅಲ್ಲ. ಅವರು ಒಬ್ಬ ನಾಲಾಯಕ್‌ ಪ್ರಧನಿ ಎಂದು ಸಿದ್ದು ವಾಗ್ದಾಳಿ ನಡೆಸಿದರು. ಪ್ರಧಾನಿ ಮನಮೋಹನ್‌ ಸಿಂಗ್‌ ಭಾರತವನ್ನು ಸೋನಿಯಾ ಮಯವಾಗಿ ಮಾಡಲು ಮುಂದಾಗಿದ್ದಾರೆ. ಆದರೆ ನರೇಂದ್ರ ಮೋದಿ ಭಾರತವನ್ನು ಸೋನಾಮಯ ಅಂದ್ರೆ ಚಿನ್ನದ ನಾಡನ್ನಾಗಿ ಮಾಡುವ ಯತ್ನದಲ್ಲಿದ್ದಾರೆ ಎಂದು ನವಜೋದ್‌ ಸಿಂಗ್‌ ಹೇಳಿದ್ರು.

ಭಾಷಣದ ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ...

PTI
PTI



ನಂತರ ಮಾತನಾಡಿದ ನಿತಿನ್ ಗಡ್ಕರಿ ಪ್ರಧಾನಿಗೆ ಮಾನ ಮರ್ಯಾದೆ ಇಲ್ಲ. ಇದ್ದಿದ್ದರೆ ಇಷ್ಟೋತ್ತಿಗಾಗಲೇ ರಾಜಿನಾಮೆಯನ್ನು ನೀಡುತ್ರತಿದ್ದರು ಎಂದು ಕಿಡಿ ಕಾರಿದ್ರು. ಇಂಥವರಿಂದ ದೇಶ ಬದಲಾಗಲ್ಲ. ಸ್ವತಃ ರಾಹುಲ್‌ ಗಾಂಧಿಯೇ ತಮ್ಮ ಪಕ್ಷದ ನಿರ್ಧಾರಗಳ ವಿರುದ್ಧ ತಿರುಗಿಬಿದ್ದು ಸುಗ್ರೀವಾಜ್ಞೆಯನ್ನು "ನಾನ್ಸೆನ್ಸ್‌" ಎಂದು ಬೈದಿದ್ದರೂ, ರಾಜಿನಾಮೆ ಏಕೆ ನೀಡುತ್ತಿಲ್ಲ? ಎಂದು ಗಡ್ಕರಿ ಪ್ರೆಶ್ನಿಸಿದರು.

ಯುಪಿಎ ಸಕಾರದ ವಿರುದ್ಧ ಹರಿ ಹಾಯ್ದ ನಿತಿನ್ ಗಡ್ಕರಿ "ಯುಪಿಎ ಸರ್ಕಾರ ಅಮ್ಮ ಮಗನ ಸರ್ಕಾರವಾಗಿದ್ದು, ಇಲ್ಲಿ ಯಾರಲ್ಲಿಯೂ ಒಮ್ಮತವಿಲ್ಲ. ತಾಯಿ ಒಂದು ಹೇಳಿದರೆ, ಮಗ ಮತ್ತೊಂದು ಹೇಳುತ್ತಾನೆ. ಇದೊಂದು ಡಬಲ್‌ ಗೇಮ್‌ ಸರ್ಕಾರ. ಇಂತಹ ಭ್ರಷ್ಟ ಸರ್ಕಾರದಿಂದ ನಿಷ್ಟೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್‌ ಅನ್ನು ಕಿತ್ತೊಗೆದು ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಗಡ್ಕರಿ ಜನತೆಗೆ ಕರೆ ನೀಡಿದ್ರು.

ಭಾಷಣದ ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ...
PTI
PTI


PTI
PTI
ಗಡ್ಕರಿ ಭಾಷಣ ಮುಗಿಸಿದ ನಂತರ ಬಿಜೆಪಿಯ ಭಾವೀ ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ನಿಂತರು.

ಆರಂಭದಲ್ಲಿಯೇ ಸೋನಿಯಾ ಕುಟುಂಬನ್ನು ತರಾಟೆಗೆ ತೆಗೆದುಕೊಂಡ ನರೇಂದ್ರ ಮೋದಿಯು ದೆಹಲಿಯಲ್ಲಿ ಕೇವಲ ಒಂದು ಸರ್ಕಾರ ಇಲ್ಲ. ಇಲ್ಲಿ ಶೀಲಾ ದೀಕ್ಷಿತ್‌ ಸರ್ಕಾರ ಇದೆ. ಅಮ್ಮನ ಸರ್ಕಾರ ಇದೆ. ಮಗನ ಸರ್ಕಾರ ಇದೆ. ಅಷ್ಟೇ ಅಲ್ಲ ಅಳಿಯನ ಸರ್ಕಾರ ಕೂಡ ಇದೆ ಎಂದು ವ್ಯಂಗ್ಯವಾಡಿದ್ರು.

ದಿಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಅವರನ್ನು ತರಾಟೆಗೆ ತೆಗೆದುಕೊಂಡ ನರೇಂದ್ರ ಮೋದಿ, ಜಗತ್ತಿನ ಸುಖೀ ಮುಖ್ಯಮಂತ್ರಿ ಎಂದರೆ ಶೀಲಾ ದೀಕ್ಷಿತ್‌ ಅವರು. ರಾಷ್ಟ್ರ ರಾಜಧಾನಿಯನ್ನು ಭ್ರಷ್ಟರು ಕೊಳ್ಳೆ ಹೊಡಯುತ್ತಿದ್ದಾರೆ. ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಇಷ್ಟೆಲ್ಲಾ ಆದರೂ ಇಲ್ಲಿನ ಮುಖ್ಯಮಂತ್ರಿಗಳು ಯಾವುದಕ್ಕೂ ಚಿಂತೆ ಮಾಡದೇ ಆರಾಮಾಗಿ ನಿದ್ದೆ ಮಾಡ್ತಾರೆ ಎಂದು ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಕಿಡಿ ಕಾರಿದ್ರು.

ಭಾಷಣದ ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ...
PTI
PTI

೧. ದಿಲ್ಲಿ ಸರ್ಕಾರಕ್ಕೆ ಲಕ್ವಾ ಹೊಡೆದಿದ

ದಿಲ್ಲಿ ಸರ್ಕಾರಕ್ಕೆ ಲಕ್ವಾ ಹೊಡೆದಿದೆ. ರಾಷ್ಟ್ರ ರಾಜಧಾನಿಯಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ವಿದ್ಯುತ್‌ ಸಮಸ್ಯೆ ಇದೆ. ಸುರಕ್ಷತೆಯ ಸಮಸ್ಯೆ ಇದೆ. ಅಭಿವೃದ್ದಿ ಕುಂಟಿತವಾಗುತ್ತಿದೆ. ಇದೆಲ್ಲದರ ಬಗ್ಗೆ ಯೋಚನೆ ಮಾಡದೇ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಕಣ್ಣು ಮುಚ್ಚಿ ನಿದ್ದೆ ಮಾಡುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ರು.

ಬೃಹತ್‌ ರ‍್ಯಾಲಿಯಲ್ಲಿ ಗಾಂಧಿ ಭಕ್ತಿಯ ಕಥೆ ಹೇಳಿದ ಮೋದಿ.. ಭಾಷಣದ ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ...

PTI
PTI

ಬೃಹತ್‌ ರ‍್ಯಾಲಿಯಲ್ಲಿ ಗಾಂಧಿ ಭಕ್ತಿಯ ಕಥೆ ಹೇಳಿದ ಮೋದಿ

ಕಾಂಗ್ರೆಸ್‌ ಸರ್ಕಾರಕ್ಕೆ ಗಾಂಧಿ ಮೇಲೆ ಭಕ್ತಿ ಹೆಚ್ಚಾಗಿದೆ. ಹೀಗಾಗಿಯೇ ಟನ್‌ ಗಟ್ಟಲೇ ಗಾಂಧಿ ನೋಟನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಕಾಮನ್‌ ವೆಲ್ತ್‌ ಹಗರಣ, 2 ಜಿ ಹಗರಣ, ಐಪಿಎಲ್‌ ಹಗರಣ ಸೇರಿದಂತೆ ಕೋಟ್ಯಾಂತರ ಮೌಲ್ಯದ ಹಗರಣಗಳ ಮೂಲಕ ದೇಶದ ಸಂಪತ್ತನ್ನು ಲೂಟಿ ಮಾಡುವಲ್ಲಿ ಯುಪಿಎ ಸರ್ಕಾರ ನಿರತವಾಗಿದೆ. ಇದು ಯುಪಿಎ ಸರ್ಕಾರದ ಗಾಂಧಿ ಭಕ್ತಿ ಎಂದು ಮೋದಿ ವ್ಯಂಗ್ಯವಾಡಿದ್ರು.

ಭಾಷಣದ ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ...

PTI
PTI

ವಾಜಪೇಯಿ ಸರ್ಕಾರಕ್ಕೆ ಹೋಲಿಸಿದರೆ ಕಾಂಗ್ರೆಸ್‌ ಸರ್ಕಾರದ ಸಾಧನೆ ಶೂನ್ಯ.

ಹಿಂದಿನ ವಾಜಪೇಯಿ ಸರ್ಕಾರ ಮತ್ತು ಇಂದಿನ ಕಾಂಗ್ರೆಸ್‌ ಸರ್ಕಾರದ ಸಾಧನೆ ಎರಡನ್ನೂ ಬಿಚ್ಚಿಟ್ಟ ನರೇಂದ್ರ ಮೋದಿ " ವಾಜಪೇಯಿ ಸರ್ಕಾರ ಇದ್ದಾಗ 6 ಕೋಟಿ ಜನರಿಗೆ ರೋಜ್‌ಗಾರ್‌ ಯೋಜನೆಯ ಫಲ ಸಿಕ್ಕಿದೆ. ಆದ್ರೆ ಕಾಂಗ್ರೆಸ್‌ ಸರ್ಕಾರ 2004 ರಿಂದ 2009 ರ ಒಳಗೆ ಕೇವಲ 17 ಲಕ್ಷ ಜನರಿಗೆ ರೋಜ್‌ಗಾರ್‌ ಯೋಜನೆ ಫಲ ಸಿಕ್ಕಿದೆ. ರೈತಾಪಿ ವರ್ಗದ, ಹಳ್ಳಿಗರನ್ನು ಕಾಂಗ್ರೆಸ್‌ ಕಡೆಗಣಿಸಿರುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಮತ್ತೊಂದಿಲ್ಲ ಎಂದು ಹೇಳಿದ್ರು.

ಪ್ರಧಾನಿಗೆ ಅಗೌರವ ತೋರಿದ ರಾಹುಲ್‌ ಗಾಂಧಿ ಬಗ್ಗೆ ಟೀಕೆ. ಭಾಷಣದ ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ...

PTI
PTI

ಪ್ರಧಾನಿಗೆ ಅಗೌರವ ತೋರಿದ ರಾಹುಲ್‌ ಗಾಂಧಿ ಬಗ್ಗೆ ಟೀಕೆ

ಭಾರತದ ಪ್ರಧಾನಿ ಮನಮೋಹನ್‌ ಸಿಂಗ್‌ ಬಗ್ಗೆ ಸ್ವತಃ ಕಾಂಗ್ರೆಸಿಗರಿಗೆ ಗೌರವವಿಲ್ಲ. ಸ್ವತಃ ರಾಹುಲ್ ಗಾಂಧಿಯೇ ಪ್ರಧಾನಿಯ ಕಾರ್ಯವೈಖರಿಯ ಬಗ್ಗೆ ನಾನ್‌ಸೆನ್ಸ್‌ ಎಂದು ಕರೆದು ಪ್ರಧಾನಿಗೆ ಅಗೌರವ ತೋರಿಸಿದ್ದಾರೆ. ನಮ್ಮವರೇ ಪ್ರಧಾನಿಯನ್ನು ಹೀಗೆ ಅಗೌರವದಿಂದ ಕಂಡರೆ ಪಾಕ್ ಪ್ರಧಾನಿ ನವಾಜ್‌ ಶರೀಫ್‌ ಹೇಗೆ ತಾನೇ ಗೌರವ ನೀಡಲು ಸಾಧ್ಯ? ನನ್ನ ದೇಶದತ್ತ ಯಾರೂ ಕೂಡ ಬೆರಳು ತೋರಿಸುವುದನ್ನು ನಾನು ಸಹಿಸುವುದಿಲ್ಲ ಎಂದು ಮೋದಿ ಸ್ವಾಭಿಮಾನದಿಂದ ನುಡಿದರು.

ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಮಾನ ಮರ್ಯಾದೆಯನ್ನು ಸ್ವತಃ ಕಾಂಗ್ರೆಸ್‌ ಯುವರಾಜ ರಾಹುಲ್‌ ಗಾಂಧಿಯೇ ಅಂತರ್‌ ರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ್ದಾರೆ.

ಭಾಷಣದ ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ...

PTI
PTI

ಪ್ರಧಾನಿ ಸಿಂಗ್‌ ಬಗ್ಗೆ ವಾಗ್ಧಾಳಿ ನಡೆಸಿದ ಮೋದಿ.

ಮೇರಾ ದೇಶ್‌ ಗರೀಬ್‌ ದೇಶ್‌ ಹೈ ಎಂದು ಹೇಳುತ್ತಲೇ ಭಾರತೀಯರ ಬಡತನ ಮತ್ತು ಹಸಿದ ಹೊಟ್ಟೆಯನ್ನು ಮುಂದಿಟ್ಟುಕೊಂಡು ಅಂತರ್‌ ರಾಷ್ಟ್ರೀಯ ಮಟ್ಟದಲ್ಲಿ ಸಿಂಪತಿ ಗಿಟ್ಟಿಸಿಕೊಳ್ಳಲು ಪ್ರಧಾನಿ ಸಿಂಗ್‌ ಯತ್ನಿಸುತ್ತಿದ್ದಾರೆ. ಒಬಾಮಾ ಎದುರು ಕುಳಿತು ನಾನು ಬಡದೇಶವಾದ ಹಿಂದೂಸ್ಥಾನದಿಂದ ಬಂದಿದ್ದೇನೆ ಎಂದು ಹೇಳಿಕೊಳ್ಳುವುದರ ಮೂಲಕ ಭಾರತ ದೇಶದ ಗೌರವಕ್ಕೆ ಕುಂದಾಗುವಂತೆ ಸಿಂಗ್‌ ವರ್ತಿಸಿದ್ದಾರೆ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

ಭಾಷಣದ ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ...

PTI
PTI

PTI
PTI
ಹಿಂದೂಸ್ಥಾನದ ಪ್ರಧಾನಿ ದೆಹಾದಿ ಸ್ತ್ರೀಯಂತಿದ್ದಾರೆ ಎಂದು ಪಾಕ್‌ ಪ್ರಧಾನಿ ಅವಮಾನಿಸಿದರೂ, ಬಿಸ್ಕೇಟ್‌ ತಿನ್ನುತ್ತಿದ್ದ ಮೇಧಾವಿ.

ಪಾಕ್‌ ಪ್ರಧಾನಿ ನವಾಜ್‌ ಶರೀಫ್‌ ಭಾರತದ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ದೆಹಾದಿ ಸ್ತ್ರೀ (ಹಳ್ಳಿಯ ಹೆಂಗಸು) ಎಂದು ಕರೆದರೂ ಅವರು ಮಿಠಾಯಿ ತಿನ್ನುತ್ತಿದ್ದರಂತೆ. ಸ್ವಾಭಿಮಾನಿಯಾದ ಭಾರತೀಯರು ಬಿಸ್ಕೇಟನ್ನು ಪಾಕ್ ಪ್ರಧಾನಿಯ ಮುಖದ ಮೇಲೆ ಬಿಸಾಕಿ ದಿಟ್ಟ ಉತ್ತರವನ್ನು ನೀಡಿ ಎದ್ದು ಬರುತ್ತಿದ್ದರು. ಆದ್ರೆ ಭಾರತದ ಪ್ರಧಾನಿ ಇಂದಿಗೂ ಮೌನವಾಗಿಯೇ ಇದ್ದಾರೆ ಎಂದು ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ನನ್ನ ದೇಶವನ್ನು ಅವಮಾನ ಮಾಡುವುದನ್ನು ನಾನು ಎಂದಿಗೂ ಸಹಿಸುವುದಿಲ್ಲ. ಯಾರೊಬ್ಬರೂ ನನ್ನ ದೇಶದತ್ತ ಬೆರಳು ತೋರಿಸುವುದನ್ನು ನಾನು ಸಹಿಸುವುದಿಲ್ಲ ಎಂದು ಮೋದಿ ಖಡಕ್‌ ಆಗಿ ಹೇಳಿದ್ರು.

ದೇಶದ ಗೌರವವನ್ನು ಕಾಪಾಡಲಾಗದ ಇಂತಹ ಕಾಂಗ್ರೆಸ್‌ ಪಕ್ಷವನ್ನು ಕಿತ್ತೊಗೆಯಿರಿ ಎಂದು ಜನತೆಗೆ ಕರೆ ಕೊಟ್ಟರು ಮೋದಿ.

ಭಾಷಣದ ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ...

PTI
PTI
ಪಾಕ್‌ ಎದುರು ತಲೆ ಎತ್ತಿ ಘರ್ಜಿಸಿ, ದಿಟ್ಟ ಉತ್ತರ ನೀಡುವಿರಾ?

ಪಾಕ್ ಪ್ರಧಾನಿ ನವಾಜ್‌ ಶರೀಫ್‌ ಅವರನ್ನು ಮತ್ತೊಮ್ಮೆ ಭೇಟಿ ಮಾಡಿ ಮಾತನಾಡಲು ಸಿಂಗ್‌ ಸಜ್ಜಾಗಿದ್ದಾರೆ. ಈಗಲಾದರೂ ಪಾಕಿಸ್ಥಾನಕ್ಕೆ ದಿಟ್ಟ ಉತ್ತರವನ್ನು ನೀಡಿ. ಘರ್ಜಿಸಿ ತಲೆ ಎತ್ತಿ ಮಾತಾಡಿ. ಯಾಕೆ ನಿಮ್ಮ ಮಾತನಾಡುವ ಆಕ್ತಿ ಅಡಗಿದೆಯೇ? ಎಂದು ಕೇಳುವುದರ ಮೂಲಕ ಸಿಂಗ್‌ ಮೌನವನ್ನು ಮೋದಿ ಪ್ರೆಶ್ನಿಸಿದ್ರು.

ಭಾಷಣದ ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ...

ನನ್ನ ಮೇಲೆ ಭರವಸೆ ಇಟ್ಟು ಬಿಜೆಪಿಗೆ ಮತ ನೀಡಿ.

ಕಾಂಗ್ರೆಸ್‌ ಸರ್ಕಾರ ಜನರ ನಂಬಿಕೆಗಳಿಗೆ ಮೋಸ ಮಾಡಿದೆ. ಆದ್ರೆ ನಾನು ನಿಮ್ಮ ಸೇವೆ ಮಾಡ್ತೀನಿ.. ನಿಮ್ಮ ಸೇವೆಗಾಗಿ ನಾನು ಹಗಲು ಇರುಳು ದುಡಿಯುತ್ತೇನೆ. ನನ್ನ ಮೇಲೆ ಭರವಸೆ ಇಡಿ. ನನ್ನ ಕೆಲಸದ ಮೇಲೆ ಭರವಸೆ ಇಡಿ.. ನಾನು ನಿಮ್ಮ ವಿಶ್ವಾಸವನ್ನು ಉಳಿಸಿಕೊಂಡು ಹೋಗುತ್ತೇನೆ. ನಿಮ್ಮ ನಂಬಿಕೆಗೆ ಎಂದಿಗೂ ಧಕ್ಕೆ ತರುವುದಿಲ್ಲ. ಎಂದಿಗೂ ನಿಮ್ಮ ಭರವಸೆಯನ್ನು ಮುರಿಯುವುದಿಲ್ಲ. ನಿಮ್ಮ ಕನಸಿಗಾಗಿ ನಾವು ದುಡಿಯುತ್ತೇವೆ. ನಿಮ್ಮ ಕನಸುಗಳಿಗೆ ನಾನು ಕಣ್ಣಾಗಿ ಇರ‍್ತೀನಿ ಎಂದು ಹೇಳುವುದರ ಮೂಲಕ ಮುಂದಿನ ಚುನಾವಣೆಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವಂತೆ ಜನತೆಗೆ ಕರೆ ನೀಡಿದರು.

2014 ರಲ್ಲಿ ಇಂತಹ ಡರ್ಟಿ ಟೀಮ್‌ ಅನ್ನು ಅಧಿಕಾರಕ್ಕೆ ತರಬೇಡಿ.. ಸಮಗ್ರ ಅಭಿವೃದ್ದಿಗೆ ಸಹಾಯಕವಾಗುವಂತಹ ಬಿಜೆಪಿಗೆ ಮತ ನೀಡಿ ಎಂದು ಮೋದಿ ಹೇಳಿದ್ರು.

PTI
PTI

ವೆಬ್ದುನಿಯಾವನ್ನು ಓದಿ