ಜಗನ್ ಮೋಹನ್ ರೆಡ್ಡಿ 51 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಶುಕ್ರವಾರ, 5 ಅಕ್ಟೋಬರ್ 2012 (11:14 IST)
PR
ಅಕ್ರಮ ಆಸ್ತಿ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ವೈಎಸ್ಆರ್ ಕಾಂಗ್ರೆಸ್ ಮುಖಂಡ ಜಗನ್ ಮೋಹನ್ ರೆಡ್ಡಿ ಹಾಗೂ ಸಹವರ್ತಿಗಳ 51 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಜಗನ್ ಒಡೆತನದ ಜನನಿ ಇನ್ಪ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ 13 ಎಕರೆಗೂ ಹೆಚ್ಚು ಭೂಮಿ, ಜಗತಿ ಪಬ್ಲಿಕೇಷನ್ಸ್‌ನ 14,50 ಕೋಟಿ ನಿಶ್ಚಿತ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಎಂ.ಎಸ್.ಹೆಟೆರೋ ಡ್ರಗ್ಸ್‌ನ 35 ಎಕರೆ ಭೂಮಿ, 3 ಕೋಟಿ ನಿಶ್ಚಿತ ಠೇವಣಿ, ಎಪಿಎಲ್ ರಿಸರ್ಚ್ ಸೆಂಟರ್ ಲಿಮಿಟೆಡ್‌ನ 96 ಎಕರೆ ಭೂಮಿ, ಅರಬಿಂದೋ ಫಾರ್ಮ್‌ನ 3 ಕೋಟಿ ನಿಶ್ಚಿತ ಠೇವಣಿಯೂ ಮುಟ್ಟುಗೋಲಿಗೊಳಗಾಗಿದೆ.

ಅಕ್ರಮ ಆಸ್ತಿ ಪ್ರಕರಣದಲ್ಲಿ ಹಲವು ತಿಂಗಳಿಂದ ಹೈದರಾಬಾದ್ ಚಂಚಲಗುಡಾ ಜೈಲಿನಲ್ಲಿರುವ ಜಗನ್ ಮೋಹನ್ ರೆಡ್ಡಿ ಅವರನ್ನು ಜಾರಿ ನಿರ್ದೇಶನಾಲಯವು ಕೆಲ ತಿಂಗಳಿಂದ ತೀವ್ರ ವಿಚಾರಣೆಗೆ ಒಳಪಡಿಸಿತ್ತು.

ವೆಬ್ದುನಿಯಾವನ್ನು ಓದಿ