ಜನಲೋಕಪಾಲ್ ಜಾರಿಯಾಗದಿದ್ರೆ ರಾಜೀನಾಮೆ: ಕೇಜ್ರಿವಾಲ್ ಘೋಷಣೆ

ಶುಕ್ರವಾರ, 14 ಫೆಬ್ರವರಿ 2014 (15:16 IST)
PR
PR
ನವದೆಹಲಿ: ಭ್ರಷ್ಟಾಚಾರ ವಿರೋಧಿ ಲೋಕಪಾಲ್ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಅನುಮೋದನೆಯಾಗದಿದ್ದರೆ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಸರ್ಕಾರ ರಾಜೀನಾಮೆ ನೀಡುವ ಬೆದರಿಕೆ ಹಾಕಿದೆ. ತಮ್ಮ ಅನುಮೋದನೆಯಿಲ್ಲದೇ ಮಸೂದೆಯನ್ನು ಮಂಡಿಸಲು ಸಾಧ್ಯವಿಲ್ಲ ಎಂದು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದರು.ಕಾನೂನು ಸಚಿವ ಸೋಮನಾಥ್ ಭಾರ್ತಿ ರಾಜೀನಾಮೆ ನೀಡುವ ತನಕ ಕಲಾಪ ನಡೆಯುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಕೂಡ ಸೂಚನೆ ನೀಡಿದೆ.

ಇದು ಇತ್ತೀಚಿನ ಬೆಳವಣಿಗೆಗಳು
ಅರವಿಂದ್ ಕೇಜ್ರಿವಾಲ್ ದೆಹಲಿ ವಿಧಾನಸಭೆಗೆ ತಮ್ಮ ತಂದೆ, ತಾಯಿಗಳೊಂದಿಗೆ ಆಗಮಿಸಿದರು.ಕಾನೂನು ಸಚಿವ ಸೋಮನಾಥ್ ಭಾರ್ತಿ ಮಧ್ಯಾಹ್ನ 2 ಗಂಟೆಗೆ ಜನಲೋಕಪಾಲ್ ಮಸೂದೆಯನ್ನು ಮಂಡಿಸಲಿದ್ದಾರೆ. ಪ್ರತಿಪಕ್ಷ ಬಿಜೆಪಿ ಮತ್ತು ಬಾಹ್ಯ ಬೆಂಬಲ ನೀಡಿರುವ ಕಾಂಗ್ರೆಸ್ ವಿವಾದಗಳ ಸರಣಿಗೆ ಸಂಬಂಧಿಸಿದಂತೆ ಕಾನೂನುಸಚಿವರ ಪದಚ್ಯುತಿಗೆ ಒತ್ತಾಯಿಸಿದೆ. ಭ್ರಷ್ಟ ಸರ್ಕಾರಿ ಅಧಿಕಾರಿಗಳ ತನಿಖೆಗೆ ಲೋಕಪಾಲ ರಚನೆಯಾಗದಿದ್ದರೆ ತಾವು ರಾಜೀನಾಮೆ ನೀಡುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ. ಜನಲೋಕಪಾಲಕ್ಕಾಗಿ ತಾವು 1000 ಬಾರಿ ರಾಜೀನಾಮೆಗೂ ಸಿದ್ದ ಎಂದು ಅವರು ಹೇಳಿದ್ದರು.

ವೆಬ್ದುನಿಯಾವನ್ನು ಓದಿ