ಜಮ್ಮು ಗಡಿಯಲ್ಲಿ ಪಾಕ್ ಪಡೆಗಳಿಂದ ಗುಂಡಿನ ದಾಳಿ

ಶನಿವಾರ, 21 ಮಾರ್ಚ್ 2009 (16:49 IST)
ಕೆಲವು ತಿಂಗಳ ಅಂತರದ ಬಳಿಕ ಮತ್ತೆ ತನ್ನ ಕದನ ವಿರಾಮ ಚಾಳಿ ಮುಂದುವರಿಸಿರುವ ಪಾಕಿಸ್ತಾನೀ ಪಡೆಗಳು, ಜಮ್ಮು ಮತ್ತು ಕಾಶ್ಮೀರದ ಉರಿ ವಲಯದಲ್ಲಿ ಶುಕ್ರವಾರ ರಾತ್ರಿಯಿಡೀ ಭಾರತೀಯ ನೆಲೆಗಳತ್ತ ನಿರಂತರ ಗುಂಡಿನ ದಾಳಿ ನಡೆಸಿವೆ.

ರಾತ್ರಿ 10 ಮತ್ತು ಅಪರಾತ್ರಿ 3 ಗಂಟೆಯ ನಡುವೆ ಉರಿ ವಲಯದ ಕಮಲ್‌ಕೋಟೆಯಲ್ಲಿರುವ ಭಾರತೀಯ ನೆಲೆಗಳತ್ತ ಪಾಕಿಸ್ತಾನಿ ಪಡೆಗಳು 1500ರಿಂದ 2000 ಸುತ್ತಿನ ಗುಂಡಿನ ಮಳೆಗರೆದವು ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಈ ಗುಂಡಿನ ದಾಳಿಯಲ್ಲಿ ಲ್ಯಾನ್ಸ್ ನಾಯಕ್ ಪ್ರಕಾಶ್ ಸಿಂಗ್ ಎಂಬವರು ಗಾಯಗೊಂಡಿದ್ದಾರೆ. ಈ ಗುಂಡಿನ ದಾಳಿ ಅಪ್ರಚೋದಿತವಾಗಿದ್ದು, ಭಾರತೀಯ ಪಡೆಗಳು ಕೂಡ ಲಘು ಗುಂಡಿನ ಮೂಲಕ ಪ್ರತಿದಾಳಿ ನಡೆಸಿದವು ಎಂದು ಹೇಳಿದರು. 2003ರಲ್ಲಿ ಭಾರತ ಮತ್ತು ಪಾಕಿಸ್ತಾನಗಳು ಈ ಗಡಿಭಾಗದಲ್ಲಿ ಕದನ ವಿರಾಮ ಘೋಷಿಸಿದ್ದವು.

ವೆಬ್ದುನಿಯಾವನ್ನು ಓದಿ