ಜಯಾ ನಿರ್ಧಾರದ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಾಧ್ಯತೆ

ಗುರುವಾರ, 20 ಫೆಬ್ರವರಿ 2014 (10:25 IST)
PR
PR
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಲ್ಲಿ ತಪ್ಪಿತಸ್ಥರಾದ ಏಳು ಜನರನ್ನು ಬಿಡುಗಡೆ ಮಾಡುವ ತಮಿಳುನಾಡು ಸರ್ಕಾರದ ನಿರ್ಧಾರದ ವಿರುದ್ಧ ಕೇಂದ್ರಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರವು ಮುಖ್ಯನ್ಯಾಯಮೂರ್ತಿ ಪಿ.ಸದಾಶಿವಂ ಎದುರು ಹಂತಕರ ಬಿಡುಗಡೆ ನಿರ್ಧಾರವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ. ತಮಿಳುನಾಡು ಕೇಂದ್ರ ಸರ್ಕಾರದ ಸಮ್ಮತಿಯೊಂದಿಗೆ ನಿರ್ಧಾರ ಕೈಗೊಳ್ಳುವ ಕಾನೂನಾತ್ಮಕ ಅಗತ್ಯವಿತ್ತು. ಏಕೆಂದರೆ ಹತ್ಯೆಯನ್ನು ಸಿಬಿಐ ಟಾಡಾ ಕಾಯ್ದೆಯಡಿ ತನಿಖೆ ನಡೆಸಿತು ಎಂದು ಮೂಲಗಳು ಹೇಳಿವೆ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಬುಧವಾರ ಕೇಂದ್ರಸರ್ಕಾರಕ್ಕೆ ಕೈದಿಗಳನ್ನು ಬಿಡುಗಡೆ ಮಾಡುವ ತಮ್ಮ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಲು ಮೂರು ದಿನಗಳ ಕಾಲಾವಕಾಶ ನೀಡಿದ್ದಾರೆ.

ನಂತರ ತಮ್ಮ ಅಧಿಕಾರ ಬಳಸಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು.ರಾಜೀವ್ ಗಾಂಧಿ ಪುತ್ರ ರಾಹುಲ್ ಗಾಂಧಿ ರಾಜೀವ್ ಹಂತಕರನ್ನು ಬಿಡುಗಡೆ ಮಾಡುವ ನಿರ್ಧಾರದಿಂದ ತೀವ್ರ ದುಃಖಿತರಾಗಿದ್ದರು. ತಾವು ಮರಣದಂಡನೆಗೆ ವೈಯಕ್ತಿಕವಾಗಿ ವಿರೋಧವಿದ್ದೇವೆ. ಆದರೆ ಪ್ರಧಾನಿ ಹಂತಕರನ್ನು ಬಿಡುಗಡೆ ಮಾಡಿದರೆ, ಜನಸಾಮಾನ್ಯರು ಯಾವ ನ್ಯಾಯ ನಿರೀಕ್ಷಿಸುತ್ತಾರೆ ಎಂದು ಪ್ರಶ್ನಿಸಿದ್ದರು. ನಂತರ ಕಾಂಗ್ರೆಸ್ ಪಕ್ಷವು ಜಯಲಲಿತಾ ನಿರ್ಧಾರವನ್ನು ಖಂಡಿಸಿ ಬೇಜವಾಬ್ದಾರಿ, ಪ್ರಚಾರಪ್ರಿಯ ನಿರ್ಧಾರ ಎಂದು ಹೇಳಿತ್ತು.

ವೆಬ್ದುನಿಯಾವನ್ನು ಓದಿ