ಜಾಮೀನಿಗಾಗಿ ಸುಪ್ರೀಂ ಬಾಗಿಲು ತಟ್ಟಿದ ಲಾಲು ಪ್ರಸಾದ್ ಯಾದವ್

ಸೋಮವಾರ, 25 ನವೆಂಬರ್ 2013 (16:04 IST)
PTI
ಮೇವು ಹಗರಣದಲ್ಲಿ ಐದು ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ನವೆಂಬರ್ 29 ರಂದು ವಿಚಾರಣೆ ನಡೆಸಲಿದೆ.

ಮುಖ್ಯನ್ಯಾಯಮೂರ್ತಿ ಪಿ.ಸದಾಶಿವನ್ ನೇತೃತ್ವದ ನ್ಯಾಯಪೀಠ ಮಾಜಿ ಕೇಂದ್ರ ಸಚಿವ ಲಾಲು ಯಾದವ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಲಿದ್ದಾರೆ ಎಂದು ಹಿರಿಯ ವಕೀಲ ಪಿ.ಎಚ್.ಪಾರೀಖ್ ತಿಳಿಸಿದ್ದಾರೆ.

ಜಾರ್ಖಂಡ್ ಹೈಕೋರ್ಟ್‌ ತೀರ್ಪಿನಿಂದಾಗಿ ಸಂಸದ ಸ್ಥಾನವನ್ನು ಕಳೆದುಕೊಂಡ ಲಾಲು.ಇದೀಗ ಜಾಮೀನು ನೀಡುವಂತೆ ಸುಪ್ರೀಂ ಬಾಗಿಲು ತಟ್ಟಿದ್ದಾರೆ.

37.7 ಕೋಟಿ ರೂಪಾಯಿ ಮೇವು ಹಗರಣದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಲಾಲು ಯಾದವ್, ಜಗನ್ನಾಥ ಮಿಶ್ರಾ ಮತ್ತು 43 ಇತರರು ಅಪರಾಧಿಗಳಾಗಿದ್ದಾರೆ.

ವೆಬ್ದುನಿಯಾವನ್ನು ಓದಿ