ಜು.15 ರಂದು ಲಾಲೂ ರಾಜಕೀಯ ಭವಿಷ್ಯ ನಿರ್ಧಾರ

ಶುಕ್ರವಾರ, 21 ಜೂನ್ 2013 (16:08 IST)
PTI
ದೇಶಾದ್ಯಂತ ಸಂಚಲನ ಮೂಡಿಸಿದ್ದ ಬಹು ಕೋಟಿ ಮೇವು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 15ರಂದು ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಪ್ರಮುಖ ಆರೋಪಿಗಳಾದ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಮತ್ತು ಜಗನ್ನಾಥ್ ಮಿಶ್ರಾ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

ಸಿಬಿಐ ವಿಶೇಷ ನ್ಯಾಯಾಧೀಶ ಪಿ. ಕೆ. ಸಿಂಗ್ ಅವರು ಪ್ರಕರಣಕ್ಕೆ ಸಂಬಂಧಿಸಿದ ವಾದ - ಪ್ರತಿವಾದಗಳನ್ನು ಆಲಿಸಿದ್ದು ಜುಲೈ 15ರಂದು ತೀರ್ಪು ನೀಡಲಿದ್ದಾರೆ. ತೀರ್ಪಿನ ವೇಳೆ ಲಾಲೂ ಪ್ರಸಾದ್ ಮತ್ತು ಮಿಶ್ರಾ ಸೇರಿದಂತೆ ಎಲ್ಲಾ 45 ಮಂದಿ ಆರೋಪಿಗಳಿಗೂ ನ್ಯಾಯಾಲಯದಲ್ಲಿ ಹಾಜರಿರುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

1996ರಲ್ಲಿ ಪಶು ಸಂಗೋಪನೆ ಇಲಾಖೆಯ ಮೂಲಕ ನಕಲಿ ದಾಖಲೆ ಬಿಲ್‌ಗಳನ್ನು ನೀಡಿ ಸರ್ಕಾರದಿಂದ ರೂ. 37.40 ಕೋಟಿ ಹಣವನ್ನು ಅಕ್ರಮವಾಗಿ ಪಡೆದ ಪ್ರಕರಣ ಇದಾಗಿದೆ.

ವೆಬ್ದುನಿಯಾವನ್ನು ಓದಿ