ಡೆನ್ಮಾರ್ಕ್ ಮೂಲದ ಪ್ರವಾಸಿ ಮಹಿಳೆಯ ಮೇಲೆ ಗ್ಯಾಂಗ್‌ರೇಪ್

ಶನಿವಾರ, 5 ಏಪ್ರಿಲ್ 2014 (13:50 IST)
ನಗರದ ರೈಲ್ವೆ ನಿಲ್ದಾಣದ ಬಳಿ ಡೆನ್ಮಾರ್ಕ್ ಮೂಲದ ವಿದೇಶಿ ಮಹಿಳೆಯ ಮೇಲೆ ದುಷ್ಕರ್ಮಿಗಳು ಗ್ಯಾಂಗ್‌ರೇಪ್ ಎಸಗಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿದೇಶಿ ಮಹಿಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ತಮ್ಮ ಕೂಪನ್‌ಹೇಗನ್ ದೇಶಕ್ಕೆ ತೆರಲಿದ್ದು, ವೈದ್ಯಕೀಯ ಪರೀಕ್ಷೆಯನ್ನು ಕೂಡಾ ತಿರಸ್ಕರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

51 ವರ್ಷ ವಯಸ್ಸಿನ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ದರೋಡೆ ಮಾಡಿದ ಶಂಕಿತ ಆರೋಪಿಗಳು ರೌಡಿಗಳಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕಳೆದ ವಾರವಷ್ಟೆ ಭಾರತಕ್ಕೆ ಭೇಟಿ ನೀಡಿದ್ದು ಮೊದಲು ಆಗ್ರಾಕ್ಕೆ ತೆರಳಿದ್ದೆ. ನಂತರ ದೆಹಲಿಗೆ ಮರಳಿದೆ. ದೆಹಲಿಯ ಪಹಾಡ್‌ಗಂಜ್‌ನಲ್ಲಿರುವ ಅಮಾಕ್ಸ್ ಹೋಟೆಲ್‌ನಲ್ಲಿ ತಂಗಿದ್ದೆ. ನಂತರ ಮಂಗಳವಾರದಂದು ನ್ಯಾಷನಲ್ ಮ್ಯೂಸಿಯಂ ವಿಕ್ಷೀಸಿ ಮರಳುವಾಗ ಹೋಟೆಲ್‌ಗೆ ತಲುಪುವ ದಾರಿ ತಪ್ಪಿದೆ.ದಾರಿಯಲ್ಲಿ ನಿಂತಿದ್ದ ಆರೋಪಿಗಳಿಗೆ ಹೋಟೆಲ್ ವಿಳಾಸದ ಬಗ್ಗೆ ವಿಚಾರಿಸಿದಾಗ ಅವರು ನನ್ನನ್ನು ಬೇರೆ ಕಡೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ನನ್ನಲ್ಲಿದ್ದ ಹಣವನ್ನು ದೋಚಿದ್ದಾರೆ ಎಂದು ವಿದೇಶಿ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ದಾಖಲಿಸಿದ್ದಾಳೆ.

ವಿದೇಶಿ ಮಹಿಳೆ ನಂತರ ಹೋಟೆಲ್ ತಲುಪಿ ಪೊಲೀಸರಿಗೆ ಮತ್ತು ಡೆನ್ಮಾರ್ಕ್ ರಾಯಭಾರಿ ಕಚೇರಿಗೆ ಮಾಹಿತಿ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರು ಮಹಿಳೆ ನೀಡಿದ ದೂರನ್ನು ಆಧರಿಸಿ ಆರು ಮಂದಿ ಶಂಕಿತ ಆರೋಪಿಗಳನ್ನು ಬಂಧಿಸಿ ಅತ್ಯಾಚಾರ, ದರೋಡೆ ಪ್ರಕರಣಗಳನ್ನು ದಾಖಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ