ತಂಗಿಯನ್ನೇ ರೇಪ್ ಮಾಡಿ ಕೊಂದ ಅಣ್ಣ

ಸೋಮವಾರ, 31 ಮಾರ್ಚ್ 2014 (15:16 IST)
ಕೋಯಮತ್ತೂರು : ಅಣ್ಣ ತಂಗಿಯರ ಸಂಬಂಧ ಜನುಮ ಜನುಮಗಳ ಅನುಬಂಧ. ಅಣ್ಣ ತಂಗಿಯರ ಸಂಬಂಧವನ್ನೇ ಅವಮಾನಿಸುವ ರೀತಿಯಲ್ಲಿ ಅಣ್ಣನೊಬ್ಬ ಕ್ರೂರತನವನ್ನು ಮೆರೆದಿದ್ದಾನೆ. ಅಣ್ಣನೊಬ್ಬ ತನ್ನ ಸ್ವಂತ ತಂಗಿಯನ್ನೇ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ. ರಾಕಿ ಹಬ್ಬದ ಸಮಯದಲ್ಲೇ ಇಂಥದ್ದೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆ ನಡೆದಿದ್ದು ತಮಿಳುನಾಡಿನ ಕುವೈ ರತ್ತಿನಬುರಿಯಲ್ಲಿ. 25 ವರ್ಷದ ರವಿ ಡ್ರೈವರ್‌ ಆಗಿ ಕೆಲಸ ಮಾಡ್ತಿದ್ದ. ಆದರೆ ಮೊನ್ನೆ ಅದೇನಾಯಿತೋ ಏನೋ ಗೊತ್ತಿಲ್ಲ. ಮಧ್ಯಾಹ್ನವೇ ಮನೆಗೆ ಬಂದುಬಿಟ್ಟಿದ್ದಾನೆ. ಮನೆಯಲ್ಲಿ 20 ವರ್ಷದ ತನ್ನ ತಂಗಿ ಒಬ್ಬಳೆ ಇದ್ದಳು. ತನ್ನ ಪಾಡಿಗೆ ತಾನು ಮನೆ ಕೆಲಸ ಮಾಡುತ್ತಿದ್ದಳು. ಕಣ್ಣಲ್ಲೇ ಕಾಮದ ಕೆಸರನ್ನು ತುಂಬಿಕೊಂಡಿದ್ದ ರವಿ ತನ್ನ ತಂಗಿಯನ್ನು ಹಿಡಿದು ಎಳೆದಾಡಿದ್ದಾನೆ. ಜೋರಾಗಿ ಹೊಡೆದಿದ್ದಾನೆ. ಇದರಿಂದ ಪ್ರಜ್ಞೆ ಆಕೆ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟಿದ್ದಾಳೆ.

ಪ್ರಜ್ಞೆ ಇಲ್ಲದ ವೇಳೆಯಲ್ಲಿ ಆಕೆಯ ಮೇಲೆ ಕ್ರೌರ್ಯ ಎಸಗಿದ್ದಾನೆ. ತನ್ನ ಸ್ವಂತ ತಂಗಿಯಿಂದಲೇ ಕಾಮ ತೃಷೆಯನ್ನು ತೀರಿಸಿಕೊಂಡಿದ್ದಾನೆ. ಆಕೆಗೆ ಪ್ರಜ್ಞೆ ಬಂದ ನಂತರ ಅವಮಾನಕ್ಕೀಡಾದಂತಾದ ರವಿ ಆಕೆಯ ಕತ್ತನ್ನು ಹಿಸುಕಿ ಕೊಲೆ ಮಾಡಿಬಿಟ್ಟಿದ್ದಾನೆ. 20 ವರ್ಷದ ಕಲ್ಪನ ಎಂಬ ಹುಡುಗಿ ಅಣ್ಣನ ಕಾಮದಾಸೆಗೆ ಕಮರಿ ಹೋದ ಬಾಲೆ.

ಪಾಪಿ ರವಿ ಮತ್ತು ಕಲ್ಪನ ಇಬ್ಬರೂ ವಿಶ್ವನಾಥ್‌ ಮತ್ತು ದೇವಿ ಎಂಬ ದಂಪತಿಗಳ ಮಕ್ಕಳಾಗಿದ್ದರು. ಕಲ್ಪನ ಕೊಲೆಗೀಡಾಗಿರುವುದು ಗೊತ್ತಾಗುತ್ತಿದ್ದಂತೆ ಎಲ್ಲರೂ ದಂಗಾಗಿ ಹೋಗಿದ್ದರು.

ಅತ್ಯಾಚಾರಿ ಅಣ್ಣ ಕಳ್ಳ ಹೇಗೆ ಸಿಕ್ಕಿಬಿದ್ದ? ಮುಂದೆ ಕ್ಲಿಕ್ ಮಾಡಿ

ಅತ್ಯಾಚಾರಿ ಅಣ್ಣ ಕಳ್ಳ ಹೇಗೆ ಸಿಕ್ಕಿಬಿದ್ದ?

ಘಟನಾ ಸ್ಥಳಕ್ಕೆ ಆಗಮಿಸಿದ ಪೋಲೀಸರು ಪರಿಶೀಲನೆ ನಡೆಸತೊಡಗಿದ್ದರು. ಮೃತ ದೇಹವನ್ನು ಶವ ಪರೀಕ್ಷೆಗಾಗಿ ಕಳಿಸಲಾಗಿತ್ತು. ಶವ ಪರೀಕ್ಷೆಯ ವೇಳೆ ಆಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದರಿಂದ ಪೋಲೀಸರ ಸಂಶಯ ಹೆಚ್ಚಾಗಿ ಮನೆಯವರೆಲ್ಲರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಆದರೆ ರವಿ ಮಾತ್ರ ಒಂದೊಂದು ಸಲ ಒಂದೊಂದು ಹೇಳಿಕೆಯನ್ನು ಕೊಟ್ಟು ಪೋಲೀಸರ ತನಿಖೆಯನ್ನು ದಿಕ್ಕು ತಪ್ಪಿಸುವ ಯತ್ನ ಮಾಡಿದ್ದಾನೆ. ಇದರಿಂದ ಪೋಲೀಸರ ಅನುಮಾನ ಇನ್ನಷ್ಟು ಹೆಚ್ಚಾಗಿದೆ. ಪೋಲೀಸ್ ಭಾಷೆಯಲ್ಲಿ ಲಾಠಿ ಏಟಿನಿಂದ ಕೇಳಿದಾಗ ಎಲ್ಲಾ ಸತ್ಯವನ್ನು ಹೊರಗೆ ಹಾಕಿದ್ದನೆ. ಆರೋಪಿ ರವಿ ಮೇಲೆ ದೂರು ದಾಖಲಾಗಿದೆ. ತಂಗಿಯನ್ನು ಅತ್ಯಾಚಾರ ಮಾಡಿದ ಅಣ್ಣನನ್ನು ಕಂಬಿಯ ಹಿಂದೆ ಅಟ್ಟಿದ್ದಾರೆ.

ಛೆ.. ನಾಚಿಕೆಯಾಗಬೇಕು ಇಂಥವರಿಗೆ...

ವೆಬ್ದುನಿಯಾವನ್ನು ಓದಿ