ತಮಗಾದ ಹಾನಿಗೆ 50 ಲಕ್ಷ ರೂ. ಕೊಡಬೇಕು: ಬಿಜೆಪಿ ವಿರುದ್ಧ ಜೇಠ್ಮಲಾನಿ ಕೇಸ್

PR
PR
ನವದೆಹಲಿ: ಖ್ಯಾತ ವಕೀಲರೆಂದು ಹೆಸರಾದವರು. ಕಬ್ಬಿಣದ ಕಡಲೆಯ ಕೇಸುಗಳನ್ನು ತಮ್ಮ ಕಕ್ಷಿದಾರರಿಗೆ ಜಯಿಸಿಕೊಟ್ಟವರು. ಇಂತಹ ಸಂದರ್ಭದಲ್ಲಿ ತಮಗೆ ಅವಮಾನವಾದರೆ ಸುಮ್ಮನಿರುತ್ತಾರೆಯೇ, ಖ್ಯಾತ ವಕೀಲ ರಾಂ ಜೇಠ್ಮಲಾನಿ ತಮ್ಮನ್ನು ಪಕ್ಷದಿಂದ ಉಚ್ಚಾಟಿಸಿದ ಬಿಜೆಪಿ ಪಕ್ಷದ ಮೇಲೆ ನಿಂದನೆ ಪ್ರಕರಣವನ್ನು ದೆಹಲಿ ಹೈಕೋರ್ಟ್‌ನಲ್ಲಿ ದಾಖಲಿಸಿದ್ದಾರೆ.

ತಮಗಾದ ಹಾನಿಯ ನಷ್ಟವನ್ನು ತುಂಬಲು ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರು 50 ಲಕ್ಷ ರೂ. ನೀಡಬೇಕೆಂದು ಒತ್ತಾಯಿಸಿದ್ದಾರೆ. ಮಂಡಳಿಯ ಸದಸ್ಯರಲ್ಲಿ ನರೇಂದ್ರ ಮೋದಿ ಮತ್ತು ಅನಾರೋಗ್ಯಕ್ಕೀಡಾದ ವಾಜಪೇಯಿ ಅವರನ್ನು ದಂಡಪಾವತಿಯಿಂದ ಕೈಬಿಟ್ಟಿದ್ದಾರೆ.

PR
PR
ಮಂಡಳಿಯ ನಿರ್ಧಾರವನ್ನು ರದ್ದು ಮಾಡುವಂತೆ ಅವರು ಕೋರ್ಟ್ ಮೊರೆ ಹೋಗಿದ್ದಾರೆ.ಬಿಜೆಪಿ ಸಂಸದೀಯ ಮಂಡಳಿ ತಮ್ಮನ್ನು ಉಚ್ಚಾಟಿಸಿದ ನಿರ್ಧಾರ ದುರುದ್ದೇಶಪೂರಿತ ಮತ್ತು ಮಸಿಬಳಿಯುವ ಉದ್ದೇಶದಿಂದ ಕೂಡಿದೆ ಎಂದು ಜೆಠ್ಮಲಾನಿ ಆರೋಪಿಸಿದ್ದಾರೆ. ಇದರ ನಿರ್ಧಾರದ ಹಿಂದಿನ ಎಲ್ಲ ನಡಾವಳಿಗಳು ಅಸಂವಿಧಾನಿಕವಾಗಿದೆ ಎಂದು ನಿಂದನಾ ಅರ್ಜಿಯಲ್ಲಿ ತಿಳಿಸಿದ್ದಾರೆ. ಸಂಸದೀಯ ಮಂಡಳಿಯಲ್ಲಿ ರಾಜನಾಥ್ ಸಿಂಗ್, ಅಡ್ವಾಣಿ, ವಾಜಪೇಯಿ, ಮೋದಿ, ಜೋಷಿ, ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಅನಂತ ಕುಮಾರ್ , ವೆಂಕಯ್ಯ ನಾಯ್ಡು, ರಾಮಲಾಲ್ ಮತ್ತು ಗೆಹ್ಲೋಟ್ ಇದ್ದಾರೆ.

ವಾಜಪೇಯಿ ಮಂಡಳಿಯ ಸಭೆಗಳಿಗೆ ಹಾಜರಾಗಿಲ್ಲ ಮತ್ತು ಮೋದಿ ಆಗ ಸದಸ್ಯರಾಗಿರಲಿಲ್ಲ.ಸುಷ್ಮಾ ಸ್ವರಾಜ್ ಮತ್ತು ಜೇಟ್ಲಿ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ಮಾಡಿದ ಜೇಠ್ಮಲಾನಿ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ.

ವೆಬ್ದುನಿಯಾವನ್ನು ಓದಿ