ತಲ್ವಾರ್ ದಂಪತಿಗೆ ಮರಣದಂಡನೆ ವಿಧಿಸಲು ಸಿಬಿಐ ಆಗ್ರಹ

ಮಂಗಳವಾರ, 26 ನವೆಂಬರ್ 2013 (15:20 IST)
PR
PR
ನವದೆಹಲಿ: ಅರುಷಿ-ಹೇಮರಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಷಿ ಪೋಷಕರಾದ ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ಅವರಿಗೆ ಶಿಕ್ಷೆಯ ಪ್ರಮಾಣ ಇಂದು ಸಿಬಿಐ ಕೋರ್ಟ್ ಪ್ರಕಟಿಸಲಿದೆ. ಈ ಪ್ರಕರಣವನ್ನು ಅಪರೂಪದಲ್ಲಿ ಅಪರೂಪ ಎಂದು ಕರೆದ ಸಿಬಿಐ ದಂಪತಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ವಿಧಿಸಬೇಕೆಂದು ಸಿಬಿಐ ವಕೀಲರು ಕೋರಿದ್ದಾರೆ. ಎರಡು ಹತ್ಯೆಗಳು ನಡೆದಿರುವುದರಿಂದ ಈ ಪ್ರಕರಣವನ್ನು ಅಪರೂಪದಲ್ಲಿ ಅಪರೂಪ ಎಂದು ಪರಿಗಣಿಸುವಂತೆ ಕೋರಿದ್ದಾಗಿ ಸಿಬಿಐ ವಕೀಲ ಹೇಳಿದ್ದಾರೆ.

ದಂತವೈದ್ಯ ದ್ವಯರು ಗರಿಷ್ಠ ಶಿಕ್ಷೆಯಾದ ಮರಣದಂಡನೆ ಅಥವಾ ಕನಿಷ್ಠ ಶಿಕ್ಷೆಯಾದ ಜೀವಾವಧಿ ಶಿಕ್ಷೆಯನ್ನು ಎದುರಿಸಲಿದ್ದಾರೆ. ಇದೊಂದು ಅತ್ಯಂತ ಒಗಟಿನ ಹತ್ಯೆಯಾಗಿ ಪರಿಗಣಿಸಲಾಗಿದ್ದು, ದಂಪತಿ ವಿಶೇಷ ಸಿಬಿಐ ಕೋರ್ಟ್ ಶ್ಯಾಮ ಲಾಲ್ ಹತ್ಯೆ, ಸಾಕ್ಷ್ಯ ನಾಶ ಮತ್ತು ಅಪರಾಧ ಎಸಗುವ ಸಮಾನ ಉದ್ದೇಶ ಹೊಂದಿದ್ದರೆಂದು ತಿಳಿಸಿದೆ.

ವೆಬ್ದುನಿಯಾವನ್ನು ಓದಿ