ತಸ್ಲೀಮಾ ಶರಣಾಗತಿ: ಬುದ್ಧಿಜೀವಿಗಳು ವಿಷಾದ

ಭಾನುವಾರ, 9 ಡಿಸೆಂಬರ್ 2007 (12:58 IST)
PTI
ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ ಅವರು ತಮ್ಮ ಪುಸ್ತಕ ದ್ವಿಕಾಂಡಿತೊನಿಂದ ವಿವಾದಾತ್ಮಕ ಸಾಲುಗಳನ್ನು ತೆಗೆಯುವ ನಿರ್ಧಾರವು ಭವಿಷ್ಯದ ಕಲೆಯ ಅಭಿವ್ಯಕ್ತಿ ಮತ್ತು ವೈಯಕ್ತಿಕ ಸ್ಥಳಾವಕಾಶಕ್ಕೆ ಸಂಬಂಧಿಸಿದಂತೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ ಎಂದು ಬುದ್ಧಿಜೀವಿಗಳು ಮತ್ತು ಸಾಂಸ್ಕೃತಿ ವಿಶ್ಲೇಷಕರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಜವಾಹರಲಾಲ್ ನೆಹರು ವಿವಿಯ ಕಲೆ ಇತಿಹಾಸ ಪ್ರಾಧ್ಯಾಪಕಿ ಡಾ. ಪಾರುಲ್ ದೇವಿ ಇಡೀ ವಿದ್ಯಮಾನ ದುರದೃಷ್ಟಕರ. ಸಾಹಿತ್ಯ ಮತ್ತು ಕಲೆಯ ಮೇಲೆ ನಿರ್ಬಂಧಕ್ಕೆ ಕೊನೆಯೇ ಇಲ್ಲ. ತಸ್ಲೀಮಾ ತಮ್ಮ ಪುಸ್ತಕವನ್ನು ನವೀಕರಿಸಿದ್ದರಿಂದ ನಿಟ್ಟುಸಿರು ಬಿಡುವ ಜನರಿಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗಿಲ್ಲ ಎಂದು ಅವರು ನುಡಿದಿದ್ದಾರೆ.

ತಸ್ಲೀಮಾ ಬರೆದಿರುವುದನ್ನು ಸಂಪೂರ್ಣವಾಗಿ ತಿರಸ್ಕರಿಸಿ ಖಂಡಿಸುವ ಹಕ್ಕು ಯಾರಿಗಾದರೂ ಇರಬಹುದು. ಆದರೆ ನಿರ್ಭಯವಾಗಿ ಬದುಕುವ ಅವರ ಹಕ್ಕನ್ನು ಮೊಟಕುಗೊಳಿಸುವ ಅಧಿಕಾರ ಯಾರಿಗೂ ಇಲ್ಲವೆಂದು ನುಡಿದಿದ್ದಾರೆ. ಸೈದ್ಧಾಂತಿಕ ಮತ್ತು ಬೌದ್ಧಿಕ ಭಿನ್ನಾಭಿಪ್ರಾಯಗಳಿದ್ದರೂ, ವಿದ್ವಾಂಸ ಪ್ರೊ. ಭರತ್ ಗುಪ್ತಾ ಮತ್ತು ಲೇಖಕ ಸುಜಿತ್ ದತ್ತಾ ತಸ್ಲಿಮಾ ಧ್ವನಿಯನ್ನು ಉಡುಗಿಸಿದ ಕ್ರಮದ ವಿರುದ್ಧ ಕಟುವಾಗಿ ಟೀಕಿಸಿದ್ದಾರೆ.

ತಸ್ಲೀಮಾಗೆ ಜೀವಬೆದರಿಕೆ ಮತ್ತು ಅವರ ಲೇಖನಗಳನ್ನು ದಮನಿಸುವ ಬಗ್ಗೆ ಬುದ್ಧಿಜೀವಿಗಳು ಮತ್ತು ಮಾನವ ಹಕ್ಕು ಚಾಂಪಿಯನ್ನರ ದಿವ್ಯ ಮೌನದ ಬಗ್ಗೆ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ತಸ್ಲೀಮಾ ಅವರು ಮಹಿಳಾ ಲೈಂಗಿಕತೆ ಕುರಿತು ಪುರುಷರ ನಿಯಂತ್ರಣದ ವಿರುದ್ಧ ಪ್ರತಿಪಾದಿಸಿದ್ದರಿಂದಲೇ ನಾಗರಿಕ ಸಮಾಜ ವಿರೋಧ ವ್ಯಕ್ತಪಡಿಸಲು ಮೂಲ ಕಾರಣವಾಯಿತು ಎಂದು ಹೇಳಿದ ಪ್ರೊ. ಗುಪ್ತಾ ಇಡೀ ವಿದ್ಯಮಾನ ಸಾಂಪ್ರದಾಯಿಕ ಧಾರ್ಮಿಕ ಶಕ್ತಿಗಳಿಗೆ ಅವಕಾಶವಾದಿ ಶರಣಾಗುವಿಕೆ ಎಂದು ವಿಶ್ಲೇಷಿಸಿದರು.

ಮಹಿಳಾ ವಿಮೋಚನೆಯ ಬಗ್ಗೆ ಕೆಲವು ಪ್ರಮಾಣದವರೆಗೆ ನಮ್ಮ ಬುದ್ಧಿಜೀವಿಗಳು ಬೆಂಬಲಿಸಬಲ್ಲರು. ಆದರೆ ಮಹಿಳೆಯು ತನ್ನ ದೇಹ ಮತ್ತು ಲೈಂಗಿಕತೆ ಹಕ್ಕನ್ನು ಪ್ರತಿಪಾದಿಸಿದ ಕೂಡಲೇ ಅವಳ ಹೋರಾಟವನ್ನು ತ್ಯಜಿಸುತ್ತಾರೆಂದು ದತ್ತಾ ಹೇಳಿದರು.

ವೆಬ್ದುನಿಯಾವನ್ನು ಓದಿ