ತಿರುಪತಿ-ಆಂಧ್ರಾ ಕ್ಷೇತ್ರಗಳು ಹಿಂದೂಗಳಿಗೆ ಮಾತ್ರ

ಇಳಯರಾಜ

ಶನಿವಾರ, 9 ಜೂನ್ 2007 (10:38 IST)
ಜಾಗತಿಕ ಖ್ಯಾತಿ ಹೊಂದಿರುವ ಆಂಧ್ರಪ್ರದೇಶದ ತಿರುಮಲ ತಿರುಪತಿ ವೆಂಕಟೇಶ್ವರ ಸನ್ನಿಧಿಯಲ್ಲಿ ಇನ್ನು ಹಿಂದೂ ಅಲ್ಲದವರಿಗೆ ಪ್ರವೇಶವಿಲ್ಲ. ಅದರಲ್ಲೂ ಇತರ ಧರ್ಮಗಳ ಪ್ರಚಾರ ಸಂಚಂತೂ ನಡೆಯಲಾರದು. ಇಂತಹ ಚಟುವಟಿಕೆಗಳನ್ನು ಪ್ರತಿಬಂಧಿಸುವ ಸುಗ್ರೀವಾಜ್ಞೆ ಜಾರಿಯಾಗಿದೆ.

ಸರ್ಕಾರಿ ಸ್ವಾಮ್ಯದ ದೇವಳ ಗಳ ವ್ಯಾಪ್ತಿಯಲ್ಲಿರುವ ದೇವಳ ವ್ಯಾಪ್ತಿಯಲ್ಲಿ ಅನ್ಯ ಧರ್ಮದ ಪ್ರಚಾರ ನಿಷೇಧಿಸುವ ಸುಗ್ರೀವಾಜ್ಞೆಯನ್ನು ಆಂಧ್ರಪ್ರದೇಶ ಸರ್ಕಾರ ಜಾರಿಗೊಳಿಸಿದೆ. ತಿರುಪತಿ ಮಾತ್ರವಲ್ಲ ಇಂತಹ ಇತರ ದೇವಸ್ಥಾನಗಳಿಗೂ ಈ ಸುಗ್ರೀವಾಜ್ಞೆ ಅನ್ವಯವಾಗುತ್ತದೆ.

ತಿರುಪತಿಯಲ್ಲಿ ಇತ್ತೀಚಿನ ವಿವಾದವಾಗಿದ್ದ ಕ್ರೈಸ್ತ ಮತಪ್ರಚಾರ ಕಾರ್ಯ ಆರೋಪದ ಹಿನ್ನೆಲೆಯನ್ನು ನೆನಪಿಸುವಂತೆ ಈ ಸುಗ್ರೀವಾಜ್ಞೆ ಇದೆಯಾದರೂ ಯಾವ ಧರ್ಮಗಳ ಕುರಿತೂ ಸುಗ್ರೀವಾಜ್ಞೆ ಉಲ್ಲೇಖಿಸಿಲ್ಲ. ಹಿಂದೂ ಧಾರ್ಮಿಕ ಸಂಸ್ಥೆಗಳ ಕಾಯ್ದೆಯನ್ನು ಬಲಗೊಳಿಸಲು ಈ ಸುಗ್ರೀವಾಜ್ಞೆಗೆ ಸಾಧ್ಯವಾಗಲಿದೆ.

ಆಂಧ್ರ ಪ್ರದೇಶ ಸರ್ಕಾರ ಜಾರಿಗೊಳಿಸಿರುವ ಸುಗ್ರೀವಾಜ್ಞೆಯ ವ್ಯಾಪ್ತಿಯಲ್ಲಿ ಶ್ರೀಕಾಳಹಸ್ತಿಯ ಕಾಳಹಸ್ತೀಶ್ವರ, ಕನಿಪಾಕ್ಕಂ ವರಸಿದ್ಧಿ ವಿನಾಯಕ,ಶ್ರೀಶೈಲದ ಮಲ್ಲಿಕಾರ್ಜುನ, ವಿಜಯವಾಡದ ದುರ್ಗಮಲೇಶ್ವರ, ಸಿಂಹಾಚಲದ ವರಾಹ ನರಸಿಂಹ ಮತ್ತು ವೀರ ವೆಂಕಟ ಸತ್ಯನಾರಾಯಣ ಸ್ವಾಮಿ ದೇವಸ್ಥಾನಗಳು ಒಳಗೊಳ್ಳುತ್ತವೆ.

ತಿರುಪತಿಯ ತಿರಮಲ ವೆಂಕಟೇಶ್ವರ ದೇವಾಲಯದ ಪಾವಿತ್ರ್ಯಕ್ಕೆ ಕಳಂಕ ತರುವ ಯಾವುದೇ ಕಾರ್ಯವನ್ನು ತಡೆಯಬೇಕೆಂದು ಆಗ್ರಹಿಸಿ ಕರ್ನಾಟಕದ ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥಸ್ವಾಮೀಜಿಯವರು ಇತ್ತೀಚೆಗೆ ತಿರುಪತಿಯಲ್ಲಿ ಪ್ರತಿಭಟನೆ ನಡೆಸಿಅಲ್ಲಿನ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ್ ರೆಡ್ಡಿಯವರಿಗೆ ಶ್ರೀಕ್ಷೇತ್ರದ ರಕ್ಷಣೆಯ ನಿಮಿತ್ತ ಮನವಿ ಪತ್ರಸಲ್ಲಿಸಿದ್ದುದನ್ನು ಸ್ಮರಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ