ತೀರ್ಪು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಜಗದೀಶ್ ಟೈಟ್ಲರ್

ಶುಕ್ರವಾರ, 31 ಮೇ 2013 (15:34 IST)
PR
PR
ಮೂವರು ದಾರುಣವಾಗಿ ಸಾವಿಗೀಡಾದ ಸುಮಾರು 29 ವರ್ಷಗಳ ಹಿಂದಿನ ಸಿಖ್ ವಿರೋಧಿ ದಂಗೆಯ ತನಿಖೆಯನ್ನು ಪುನರಾರಂಭಿಸಬೇಕು ಎಂದು ಆದೇಶಿಸಿರುವ ವಿಚಾರಣಾ ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಪ್ರಕರಣದಲ್ಲಿ ಸಿಬಿಐ ಸಲ್ಲಿಸಿರುವ ಮುಚ್ಚುವಿಕೆ ವರದಿಯು ತನಗೆ ಕ್ಲೀನ್‌ಚಿಟ್ ನೀಡಿದೆ. ಆದರೂ ವಿಚಾರಣಾ ನ್ಯಾಯಾಲಯವು ಪ್ರಕರಣದ ತನಿಖೆಯನ್ನು ಮರು ಸ್ಥಾಪಿಸಬೇಕೆಂದು ಆದೇಶಿಸಿರುವುದರ ವಿರುದ್ಧ ಅವರು ಸವಾಲೆಸೆದು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಟೈಟ್ಲರ್ ಸಲ್ಲಿಸಿದ ಮನವಿ ವಿಚಾರಣೆಗೆ ಬರಲಿದೆ. ಸಿಬಿಐ ಟೈಟ್ಲರ್‌ಗೆ ಕ್ಲೀನ್‌ಚಿಟ್ ನೀಡಿರುವುದನ್ನು ವಿರೋಧಿಸಿ ಗಲಭೆ ಸಂತ್ರಸ್ತರು ಸಲ್ಲಿಸಿದ ಮೇಲ್ಮನವಿಯ ಅನ್ವಯ ತನಿಖೆ ಪುನರಾರಂಭಕ್ಕೆ ವಿಚಾರಣಾ ನ್ಯಾಯಾಲಯವು ಆದೇಶಿಸಿದೆ.

ಸಂತ್ರಸ್ತ ಲಕ್ವಿಂದರ್ ಕೌರ್ ಪರವಾಗಿ ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಹಿರಿಯ ವಕೀಲ ಎಚ್.ಎಸ್. ಫೂಲ್ಕಾ, ಟೈಟ್ಲರ್ ದಂಗೆಯಲ್ಲಿ ಶಾಮೀಲಾಗಿರುವ ಬಗ್ಗಿನ ಸಾಕ್ಷಾಧಾರಗಳು ಲಭ್ಯವಿದ್ದರೂ ಸಿಬಿಐ ಅವರಿಗೆ ಕ್ಲೀನ್‌ಚಿಟ್ ನೀಡಿದೆ. ಅವರ ಅಪರಾಧ ಸಾಬೀತುಪಡಿಸಲು ಬೇಕಾದ ಪುರಾವೆಗಳು ವಿಚಾರಣಾ ನ್ಯಾಯಾಲಯದಲ್ಲಿದೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ