ತೆಲಂಗಾಣ ಮಸೂದ: ಪ್ರಧಾನಿಗೆ ಬೆಂಬಲ ಸೂಚಿಸಿದ ಬಿಜೆಪಿ

ಗುರುವಾರ, 13 ಫೆಬ್ರವರಿ 2014 (13:41 IST)
PR
ತೆಲಂಗಾಣ ಮಸೂದೆ ಮಂಡಿಸುತ್ತಿರುವ ಯುಪಿಎ ಸರಕಾರಕ್ಕೆ ಬಿಜೆಪಿ ಬೆಂಬಲ ನೀಡಲಿದೆ. ಆದರೆ, ಸೀಮಾಂಧ್ರ ಜನತೆಯ ಕಳವಳಕ್ಕೆ ಸರಕಾರ ಸ್ಪಂದಿಸಬೇಕು ಎಂದು ಹೇಳಿಕೆ ನೀಡಿದೆ.

ಸೀಮಾಂಧ್ರ ಕ್ಷೇತ್ರದ ಸಂಸದರು ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ತೆಲಂಗಾಣ ಮಸೂದೆಯನ್ನು ಸರ್ವಸಮ್ಮತವಾಗಿ ಜಾರಿಗೆ ತರಬೇಕು ಎಂದು ಪ್ರಧಾನಿ ಇಂದು ತಮ್ಮ ನಿವಾಸದಲ್ಲಿ ಬಿಜೆಪಿ ನಾಯಕರನ್ನು ಮಾಡಿದ ಭೇಟಿ ಫಲಪ್ರದವಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಬಿಜೆಪಿಯ ಉನ್ನತ ನಾಯಕರೊಂದಿಗೆ ಸುಮಾರು ಒಂದುವರೆ ಗಂಟೆಗಳ ಕಾಲ ಚರ್ಚೆ ನಡೆಸಿದ ನಂತರ ತೆಲಂಗಾಣ ಮಸೂದೆಗೆ ಬೆಂಬಲ ನೀಡಲು ಬಿಜೆಪಿ ಸಮ್ಮತಿಸಿತು. ಆದರೆ, ಸೀಮಾಂಧ್ರ ಜನತೆಗೆ ವಿಶೇಷ ಪ್ಯಾಕೇಜ್‌ಗಳನ್ನು ಘೋಷಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಬಿಜೆಪಿ ನಾಯಕರಾದ ಎಲ್‌.ಕೆ.ಆಡ್ವಾಣಿ, ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಪ್ರಧಾನಿಯೊಂದಿಗಿನ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಆಂಟನಿ, ಪಿ.ಚಿದಂಬರಂ, ಕಮಲ್‌ನಾಥ್ ಮತ್ತು ಸುಶೀಲ್ ಕುಮಾರ್ ಶಿಂಧೆ ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ