ತೆಲಂಗಾಣ ರಚನೆಗೆ ಪ್ರತಿಭಟನೆ: ಸೀಮಾಂಧ್ರದಲ್ಲಿ ಬಂದ್

ಬುಧವಾರ, 31 ಜುಲೈ 2013 (10:36 IST)
PR
PR
ಹೈದರಾಬಾದ್: ಆಂಧ್ರಪ್ರದೇಶವನ್ನು ವಿಭಜಿಸಿ ತೆಲಂಗಾಣ ರಾಜ್ಯವನ್ನು ರೂಪಿಸಲು ಕಾಂಗ್ರೆಸ್ ನಿರ್ಧರಿಸಿದ ಮಾರನೆಯ ದಿನವೇ, ಸಂಯುಕ್ತ ಆಂಧ್ರ ಜಂಟಿ ಕಾರ್ಯ ಸಮಿತಿ ಪ್ರತಿಭಟನಾರ್ಥವಾಗಿ ಬಂದ್‌ಗೆ ಕರೆ ನೀಡಿದೆ. ರಾಜ್ಯಸ್ವಾಮ್ಯದ ಬಸ್‌ಗಳ ಸಂಚಾರ ನಿಂತಿವೆ, ಶಾಲೆ ಮತ್ತು ಉದ್ಯಮ ಸಂಸ್ಥೆಗಳು ಬಂದ್ ಆಗಿವೆ.

ಮುಖ್ಯವಾಗಿ ಸೀಮಾಂಧ್ರ ಸೇರಿದಂತೆ ಪಕ್ಷದ ಮುಖಂಡರಿಂದಲೇ ತೆಲಂಗಾಣ ನಿರ್ಮಾಣಕ್ಕೆ ಆಕ್ಷೇಪ ಮತ್ತು ಪ್ರತಿಭಟನೆ ವ್ಯಕ್ತವಾದ ನಡುವೆ ಕಾಂಗ್ರೆಸ್ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಹಾಕದೇ ತೆಲಂಗಾಣ ರಚನೆಯ ನಿರ್ಧಾರವನ್ನು ಮಂಗಳವಾರ ಪ್ರಕಟಿಸಿತು.

ತೆಲಂಗಾಣ ರಚನೆಯನ್ನು ಪ್ರಕಟಿಸುವ ಮುಂಚೆ, ಈ ಪ್ರದೇಶಗಳ ಎಲ್ಲ 19 ಎಂಪಿಗಳನ್ನು ಪಕ್ಷದ ನಾಯಕತ್ವ ಕರೆಯಿತು. ಕೇಂದ್ರ ಸಚಿವರಾದ ಪಲ್ಲಮ್ ರಾಜು ಮತ್ತು ಚಿರಂಜೀವಿ ಈ ಕುರಿತು ಆತಂಕ ಹೊರಹಾಕಿದರೂ, ಪ್ರತಿಭಟನಾರ್ಥವಾಗಿ ರಾಜೀನಾಮೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಈ ನಿರ್ಧಾರವು ಈಗಾಗಲೇ ತನ್ನ ಪರಿಣಾಮಗಳನ್ನು ಬೀರುತ್ತಿದ್ದು, ಹಿರಿಯ ಕಾಂಗ್ರೆಸ್ ನಾಯಕ ಮತ್ತು ಗುಂಟೂರಿನ ಲೋಕಸಭೆ ಸದಸ್ಯ ರಾಯಪತಿ ಸಾಂಬಶಿವ ರಾಮ್ ರಾಜೀನಾಮೆಗೆ ನಿರ್ಧರಿಸಿದ್ದಾರೆ.

'ಕಾಂಗ್ರೆಸ್ ನಿರ್ಧಾರದಿಂದ ತಮಗೆ ನೋವಾಗಿದೆ. ರಾಜ್ಯದ ವಿಭಜನೆ ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ. ತೆಲಂಗಾಣ ಕಾಂಗ್ರೆಸ್ ಮುಖಂಡರು ಪಕ್ಷದ ನಾಯಕತ್ವವನ್ನು ದಾರಿತಪ್ಪಿಸಿದರು' ಎಂದು ನ್ಯೂಯಾರ್ಕ್‌ನಿಂದ ತಿಳಿಸಿದ್ದಾರೆ. ತನ್ನ ರಾಜಕೀಯ ಜೂಜಾಟದ ಬಳಿಕ ಕಾಂಗ್ರೆಸ್ ತೆಲಂಗಾಣ ರಾಷ್ಟ್ರ ಸಮಿತಿಯನ್ನು ಭೇಟಿ ಮಾಡಿತು. ಟಿಆರ್‌ಎಸ್ ಈಗ ಕಾಂಗ್ರೆಸ್ ಜತೆ ವಿಲೀನಗೊಳ್ಳುತ್ತದೆ ಎಂದು ಪಕ್ಷವು ತಿಳಿಸಿತು.

ಬಸ್ ಸಂಚಾರ ಸ್ಥಗಿತ: ಆಂಧ್ರದಲ್ಲಿ ಬಂದ್ ಹಿನ್ನೆಲೆಯಲ್ಲಿ ಬಳ್ಳಾರಿಯಿಂದ ತೆರಳುವ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ತಿರುಪತಿಗೆ ತೆರಳುವ ಬಸ್‌ ಸಂಚಾರವನ್ನು ಕೂಡ ನಿಲ್ಲಿಸಲಾಗಿದೆ.

ವೆಬ್ದುನಿಯಾವನ್ನು ಓದಿ