ದಕ್ಷಿಣ ಚೀನಾ ಕರಾವಳಿ ತೀರ ವಿಶ್ವದ ಆಸ್ತಿ: ಎಸ್‌.ಎಂ. ಕೃಷ್ಣ

ಶುಕ್ರವಾರ, 6 ಏಪ್ರಿಲ್ 2012 (16:35 IST)
PTI
ದಕ್ಷಿಣಾ ಚೀನಾ ಸಮುದ್ರದಲ್ಲಿ ತೈಲ ಅನ್ವೇಷಣ ನಡೆಸದಂತೆ ಚೀನಾ ಎಚ್ಚರಿ ನೀಡಿರುವ ಮಧ್ಯೆ, ದಕ್ಷಿಣ ಚೀನಾದ ಸಮುದ್ರ ತೀರ ವಿಶ್ವದ ಆಸ್ತಿ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ತಿರುಗೇಟು ನೀಡಿದ್ದಾರೆ.

ದಕ್ಷಿಣ ಚೀನಾ ಕರಾವಳಿ ತೀರ ವಿಶ್ವದ ಆಸ್ತಿಯಾಗಿದೆ ಎನ್ನುವುದು ಸರಕಾರದ ಅಭಿಪ್ರಾಯವಾಗಿದೆ. ದಕ್ಷಿಣ ಚೀನಾ ಏಷ್ಯಾ ವ್ಯಾಪ್ತಿಗೆ ಬರುವ ರಾಷ್ಟ್ರಗಳು ಮುಕ್ತವಾಗಿ ವಹಿವಾಟು ನಡೆಸಲು ನೆರೆಯ ರಾಷ್ಟ್ರಗಳು ಅಡ್ಡಿಯಾಗಬಾರದು ಎಂದು ಸಲಹೆ ನೀಡಿದ್ದಾರೆ.

ಏಷ್ಯನ್ ಗ್ರೂಪ್ ಆಫ್ ನೇಶನ್ಸ್‌ ಆಸಿಯಾನಾ ಸಭೆಯಲ್ಲಿ ದಕ್ಷಿಣ ಚೀನಾ ಸಮುದ್ರ ತೀರ ಏಷ್ಯಾ ರಾಷ್ಟ್ರಗಳಿಗೆ ಸಂಬಂಧಿಸಿದ್ದಾಗಿದೆ ಎನ್ನುವುದನ್ನು ಚೀನಾ ಕೂಡಾ ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ. ‍

ವಿವಾದಿತ ಪ್ರದೇಶದಲ್ಲಿ ತೈಲ ಅನ್ವೇಷಣೆಯಿಂದ ದ್ವೀಪಗಳ ಸಾರ್ವಭಾಮತ್ವಕ್ಕೆ ಧಕ್ಕೆಯಾಗುತ್ತದೆ. ವಿವಾದದಿಂದ ಮುಕ್ತವಾಗುವವರೆಗೆ ಭಾರತ, ದಕ್ಷಿಣ ಚೀನಾ ಕರಾವಳಿ ತೀರದಲ್ಲಿ ತೈಲ ಅನ್ವೇಷಣೆ ಸಾಧ್ಯವಿಲ್ಲ ಎಂದು ಚೀನಾ ಹೇಳಿಕೆ ನೀಡಿತ್ತು.

ವೆಬ್ದುನಿಯಾವನ್ನು ಓದಿ