ದಯವಿಟ್ಟು ತಿರುಪತಿಗೆ ಬರಬೇಡಿ : ಟಿಟಿಡಿ ಮನವಿ

ಮಂಗಳವಾರ, 24 ಸೆಪ್ಟಂಬರ್ 2013 (11:54 IST)
PTI
PTI
ದಯವಿಟ್ಟು ಇಂದು ತಿರುಪತಿಗೆ ಯಾರೂ ಬರಬೇಡಿ.. ನಿಮ್ಮ ತಿರುಪತಿ ಪ್ರಯಾಣವನ್ನು ದಯವಿಟ್ಟು ಮುಂದೂಡಿ. ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕೆಂದರೆ, ಮತ್ತೊಂದು ದಿನ ಬನ್ನಿ. ಇಂದು ತಿರುಪತಿಯಲ್ಲಿ ಯಾವುದೇ ದರ್ಶನ ಇರುವುದಿಲ್ಲ ಎಂದು ತಿರುಪತಿ ತಿರುಮಲ ಸಮಿತಿ ಭಕ್ತಾದಿಗಳಲ್ಲಿ ವಿನಂತಿಸಿದೆ.

ಸಮೈಕ್ಯಾಂಧ್ರಕ್ಕಾಗಿ ನಡೆಯುತ್ತಿರುವ ಹೋರಾಟದಿಂದಾದಿ ಇಂದು ಸೀಮಾಂಧ್ರದಲ್ಲಿ ಬಂದ್‌ ಆಚರಿಸಲಾಗುತ್ತಿದ್ದು ಸುಮಾರು 13 ಜಿಲ್ಲೆಗಳು ಬಂದ್‌ಗೆ ಸಕಾರಾತ್ಮಕವಾಗಿ ಸ್ಪಂದಿಸಿವೆ. ಈ ಪ್ರತಿಭಟನೆಯ ಬಿಸಿ ತಿರುಪತಿ ತಿಮ್ಮಪ್ಪನ ಸನ್ನಿಧಿಗೂ ತಟ್ಟಿದ್ದು ಇಡೀ ತಿರುಪತಿ ಈವತ್ತು ಬಂದ್‌ ಆಗಿದೆ. ಇಂದು ತಿರುಪತಿಯಲ್ಲಿ ಯಾವುದೇ ರೀತಿಯ ದರ್ಶನ, ಪೂಜೆ, ಪುನಸ್ಕಾರಗಳು ನಡೆಯುವುದಿಲ್ಲ ಎಂಬುದನ್ನು ದೇವಾಲಯದ ಸಮಿತಿ ಹೇಳಿದೆ. ಕಳೆದ 38 ವರ್ಷಗಳ ಇತಿಹಾಸದಲ್ಲಿ ತಿರುಪತಿ ಬಂದ್‌ ಆಗುತ್ತಿರುವುದು ಇದು 3ನೇ ಬಾರಿ. ಪ್ರತಿಭಟನೆಯಿಂದಾಗಿ ತಮಿಳುನಾಡು ಮತ್ತು ಕರ್ನಾಟಕದ ಗಡಿಗಳಲ್ಲಿ ವಾಹನಗಳಿಗೆ ತಡೆ ನೀಡಲಾಗಿದ್ದು, ಬಸ್‌ ವ್ಯವಸ್ಥೆ ಸ್ಥಗಿತವಾಗಿದೆ.

ವೆಬ್ದುನಿಯಾವನ್ನು ಓದಿ