ದಿಲ್ಲಿಯಲ್ಲಿ ವಿದ್ಯುತ್ ದರ ಕಡಿತ : ಮಹಾರಾಷ್ಟ್ರದಲ್ಲಿ ಯಾಕೆ ಆಗೋಲ್ಲ?

ಬುಧವಾರ, 1 ಜನವರಿ 2014 (16:13 IST)
PR
PR
ಮುಂಬೈ: ದೆಹಲಿಯಲ್ಲಿ ವಿದ್ಯುತ್ ದರವನ್ನು ಶೇ. 50ರಷ್ಟು ಕಡಿತ ಮಾಡಿರಬೇಕಾದ್ರೆ ಮಹಾರಾಷ್ಟ್ರದಲ್ಲಿ ಯಾಕಾಗೋಲ್ಲ? ಈ ಪ್ರಶ್ನೆಯನ್ನು ಸಂಸದ ಸಂಜಯ್ ನಿರುಪಮ್ ಮಹಾರಾಷ್ಟ್ರ ಸರ್ಕಾರಕ್ಕೆ ಇಟ್ಟಿದ್ದಾರೆ. ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ವಿದ್ಯುತ್ ದರವನ್ನು ಶೇ. 50ರಷ್ಟು ಕಡಿತ ಮಾಡಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲೂ ವಿದ್ಯುತ್ ದರ ಕಡಿತ ಮಾಡಿ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಸಂಸದ ಸಂಜಯ್ ನಿರುಪಮ್ ಮನವಿ ಸಲ್ಲಿಸಿದ್ದಾರೆ. ಸರ್ಕಾರಕ್ಕೆ ಕಾಂಗ್ರೆಸ್ ಸಂಸದ ಸಂಜಯ್ ನಿರುಪಮ್ ಈ ಕುರಿತು ಪತ್ರ ಬರೆದಿದ್ದಾರೆ.

ದೆಹಲಿಯ ಮಾದರಿಯನ್ನು ಬೇರೆ ರಾಜ್ಯಗಳಲ್ಲೂ ಅಳವಡಿಸಿಕೊಳ್ಳಬೇಕು ಎಂಬ ಒತ್ತಡ ಈಗ ಕಂಡುಬರುತ್ತಿದ್ದು, ಮಹಾರಾಷ್ಟ್ರದಲ್ಲೂ ವಿದ್ಯುತ್ ದರ 500 ಯೂನಿಟ್‌ವರೆಗೆ ಕಡಿತ ಮಾಡಬೇಕು ಎಂದು ಪತ್ರದಲ್ಲಿ ಅವರು ತಿಳಿಸಿದ್ದಾರೆ. ಆಮ್ ಆದ್ಮಿಯ ಸರಳತೆ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಬೇರೆ ರಾಜ್ಯಗಳೂ ಅನುಸರಿಸುವುದಕ್ಕೆ ಇನ್ನು ಮುಂದೆ ಒತ್ತಡಗಳು ಹೆಚ್ಚಬಹುದೆಂದು ಭಾವಿಸಲಾಗಿದೆ. ದೆಹಲಿಯಲ್ಲಿ ವಿದ್ಯುತ್ ದರ ಶೇ. 50ರಷ್ಟು ಕಡಿತ ಮಾಡಬಹುದಾದರೆ, ಉಚಿತ ನೀರಿನ ಪೂರೈಕೆ ಮಾಡಬಹುದಾದರೆ ಬೇರೆ ರಾಜ್ಯಗಳಲ್ಲೂ ಈ ಮಾದರಿ ಅನುಸರಿಸುವುದಕ್ಕೆ ಯಾಕೆ ಸಾಧ್ಯವಿಲ್ಲ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ.

ವೆಬ್ದುನಿಯಾವನ್ನು ಓದಿ