ದುರಂತ ಕಣ್ರೀ.. ರಾಹುಲ್‌ಗಾಂಧಿ ಭಾಷಣ ಕೇಳಲಾಗದೇ ಎದ್ದು ಹೋದ ಜನತೆ.!

ಸೋಮವಾರ, 18 ನವೆಂಬರ್ 2013 (16:56 IST)
PTI
PTI
ಒಂದೆಡೆ ಬೆಂಗಳೂರಿನಲ್ಲಿ ನಡೆದ ಮೋದಿ ಭಾಷಣಕ್ಕೆ ಲಕ್ಷಾಂತರ ಜನರು ಮುಗಿಬಿದ್ದು ಆಗಮಿಸಿದ್ರು. ಇನ್ನೊಂದೆಡೆ ರಾಹುಲ್‌ ಗಾಂಧಿಯವರ ಭಾಷಣವನ್ನು ಕೇಳಲಾಗದೇ, ಜನರು ಮಧ್ಯದಲ್ಲಿಯೇ ಹೊರ ನಡೆದ ಘಟನೆ ಕೂಡ ಸಂಭವಿಸಿದೆ. ರಾಹುಲ್ ಗಾಂಧಿಯವರು ಭಾಷಣವನ್ನು ಆರಂಭಿಸುತ್ತಿದ್ದಂತೆ, ಕೇವಲ 7 ನಿಮಿಷಗಳಲ್ಲಿಯೇ ಜನರು ಮೈದಾನದಿಂದ ಹೊರ ನಡೆದರು. ಪಾಪ ಶೀಲಾ ದೀಕ್ಷಿತ್‌ ಅವರು "ಹೋಗಬೇಡಿ.. ಹೋಗಬೇಡಿ.. ರಾಹುಲ್ ಗಾಂಧಿ ಭಾಷಣ ಕೇಳಿ ಅಂತ ಕೂಗಿಕೊಂಡರು. ಆದ್ರೆ ಕ್ಯಾರೆ ಎನ್ನದ ಮಹಾ ಜನತೆ ಮನೆಯತ್ತ ಮುಖ ಮಾಡಿಬಿಟ್ಟಿದ್ರು.

ಕಾಂಗ್ರೆಸ್‌ ಆಡಳಿತವಿರುವ ದೆಹಲಿಯಲ್ಲಿಯೇ ಈ ಘಟನೆ ನಡೆದಿದ್ದು, ರಾಹುಲ್ ಗಾಂಧಿಗೆ ತೀವ್ರ ಮುಖಭಂಗವನ್ನು ಉಂಟು ಮಾಡಿದೆ. ಇಲ್ಲಿನ ದಕ್ಷಿಣಪುರದಲ್ಲಿ ಕಾಂಗ್ರೆಸ್‌ ರ‍್ಯಾಲಿಯೊಂದನ್ನು ಹಮ್ಮಿಕೊಂಡಿತ್ತು. ಚುನಾವಣೆಯ ನಿಮಿತ್ತ ಜನರನ್ನು ಕಾಂಗ್ರೆಸ್‌ ಪಕ್ಷದತ್ತ ಸೆಳೆಯಲು ರಾಹುಲ್‌ ಗಾಂಧಿ ಈ ಪ್ರಚಾರ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. "ಇದೀಗ ರಾಹುಲ್‌ ಗಾಂಧಿಯವರು ಭಾಷಣ ಮಾಡ್ತಾರೆ. ಯಾರೂ ಹೋಗದೆ ಕೇಳಿ ಎಂದು ದೆಹಲಿಯ ಜನಪ್ರಿಯ ಮುಖ್ಯಮಂತ್ರಿಗಳಾದ ಶೀಲಾ ದೀಕ್ಷಿತ್ ಅವರು ಹೇಳಿದ್ರು. ಆದ್ರೆ ಶೀಲಾ ದೀಕ್ಷಿತ್‌ ಅವರ ಮಾತಿಗೂ ಕ್ಯಾರೆ ಎನ್ನದ ಜನರು ರಾಹುಲ್‌ ಗಾಂಧಿ ಭಾಷಣ ಆರಂಭಿಸುತ್ತಿದ್ದಂತೆ ಕೇವಲ 7 ನಿಮಿಷಗಳಲ್ಲಿ ಹೊರ ನಡೆಯಲು ಆರಂಭಿಸಿದರು. ಇದರಿಂದ ಮುಜುಗರಕ್ಕೆ ಒಳಗಾದ ರಾಹುಲ್‌ ಗಾಂಧಿ ತಮ್ಮ ಉದ್ದನೆಯ ಭಾಷಣವನ್ನು ಏಳೇ ನಿಮಿಷಕ್ಕೆ ಮುಕ್ತಾಯ ಮಾಡಿಬಿಟ್ಟರು.

ಇದನ್ನು ನೋಡಿದ್ರೆ ಜನರು ಮೋದಿ ಭಾಷಣಕ್ಕೆ ಕೊಟ್ಟಷ್ಟು ಮಹತ್ವವನ್ನು ರಾಹುಲ್‌ ಗಾಂಧಿ ಭಾಷಣಕ್ಕೆ ತೋರಿಸುತ್ತಿಲ್ಲ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಮೋದಿಗಾರ ಮೋಡಿಯ ಮಾತುಗಳನ್ನು ಕೇಳಲು ಮುಗಿ ಬೀಳುವ ಜನತೆ, ರಾಹುಲ್‌ ಗಾಂಧಿಯವರ ಭಾಷಣವನ್ನು ಆಲಿಸದೇ ಅನಾಸಕ್ತಿ ತೋರುತ್ತಿರುವುದು ಕಾಂಗ್ರೆಸ್‌ ಅಧ:ಪತನಕ್ಕೆ ಸಾಕ್ಷಿಯಾಗಿದೆ.

ವೆಬ್ದುನಿಯಾವನ್ನು ಓದಿ