ದೆಹಲಿ: ಇಂಡಿಯನ್ ಮುಜಾಹಿದಿನ್ ಶಂಕಿತ ಉಗ್ರನ ಬಂಧನ

ಗುರುವಾರ, 29 ಮಾರ್ಚ್ 2012 (09:28 IST)
PR
ಇಂಡಿಯನ್ ಮುಜಾಹಿದಿನ್ ಸಂಘಟನೆಗೆ ಸೇರಿದ ಶಂಕಿತ ಉಗ್ರಗಾಮಿಯನ್ನು ಅಪಾರ ಶಸ್ತಾಸ್ತ್ರಗಳೊಂದಿಗೆ ಬಂಧಿಸಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪೂರ್ವ ದೆಹಲಿಯಲ್ಲಿ ವಾಸವಾಗಿದ್ದ ಅಸಾದುಲ್ಲಾ ರೆಹ್ಮಾನ್ ಅಲಿಯಾಸ್ ದಿಲ್ಕಾಶ್ ಎನ್ನುವ ಉಗ್ರಗಾಮಿಯನ್ನು ಪೊಲೀಸರು ಬಂಧಿಸಿ ಮುಖ್ಯ ನ್ಯಾಯನೂರ್ತಿಗಳ ಮುಂದೆ ಹಾಜರುಪಡಿಸಲಾಗಿದ್ದು, ಏಪ್ರಿಲ್ 4ರವರೆಗೆ ಪೊಲೀಸ್ ವಶಕ್ಕೆ ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ನವೆಂಬರ್ ತಿಂಗಳಲ್ಲಿ ಪಶ್ಚಿಮ ದೆಹಲಿಯ ನಾಂಗೋಲಿಯಲ್ಲಿದ್ದ ಇಂಡಿಯನ್ ಮುಜಾಹಿದಿನ್ ಶಸ್ತ್ರಾಸ್ತ್ರ ಕಚೇರಿಯ ಮೇಲೆ ಪೊಲೀಸರು ದಾಳಿ ನಡೆಸಿದಾಗ ಹಲವು ಶಂಕಿತ ಉಗ್ರರು ಸೆರೆಸಿಕ್ಕಿದ್ದರು. ಬಿಹಾರ್‌ನ ದರ್ಬಾಂಗ್ ಮೂಲದವನಾದ ದಿಲ್ಕಾಶ್ ಆ ಸಂದರ್ಭದಲ್ಲಿ ಪರಾರಿಯಾಗಿದ್ದರು.

ದಿಲ್ಕಾಶ್ ವಿಚಾರಣೆ ನಡೆಸಿದ ಪೊಲೀಸ್ ತಂಡ ಆತನು ನೀಡಿದ ಮಾಹಿತಿಯ ಮೇರೆಗೆ ಚಂದು ನಗರದಲ್ಲಿದ್ದ ಬಾಡಿಗೆ ಮನೆಯ ಮೇಲೆ ದಾಳಿ ನಡೆಸಿ 1 ಕೆಜಿ ಸ್ಫೋಟಕ ವಸ್ತುಗಳು, ಡೆಟೋನೇಟರ್, ಟೈಮರ್ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ