ದೆಹಲಿ ವಿಧಾನಸಭೆ ಸ್ಪೀಕರ್ ಹುದ್ದೆಗೆ ಎಂ.ಎಸ್. ಧೀರ್

ಶುಕ್ರವಾರ, 3 ಜನವರಿ 2014 (19:16 IST)
PR
PR
ನವದೆಹಲಿ: ಎಎಪಿ ಅಭ್ಯರ್ಥಿ ಎಂ.ಎಸ್.ಧೀರ್ ಅವರನ್ನು ಕಾಂಗ್ರೆಸ್ ಬೆಂಬಲದೊಂದಿಗೆ ದೆಹಲಿ ವಿಧಾನಸಭೆ ಸ್ಪೀಕರ್ ಹುದ್ದೆಗೆ ಆಯ್ಕೆ ಮಾಡಲಾಗಿದೆ.ಧೀರ್ ಅವರಿಗೆ ಏಕಮಾತ್ರ ಜೆಡಿಯು ಶಾಸಕ ಮತ್ತು ಪಕ್ಷೇತರ ಸದಸ್ಯರೊಬ್ಬರು ಬೆಂಬಲ ನೀಡಿದರು.37 ಶಾಸಕರು ಧೀರ್ ಅವರಿಗೆ ಬೆಂಬಲ ನೀಡಿದರು. ಬಿಜೆಪಿ ಅಭ್ಯರ್ಥಿ ಜಗದೀಶ್ ಮುಕ್ತಿ 32 ಶಾಸಕರ ಬೆಂಬಲ ಪಡೆದರು.

ಧೀರ್ ಆಯ್ಕೆಯಾದ ಕೂಡಲೇ ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತು ಬಿಜೆಪಿ ಮುಖಂಡ ಹರ್ಷವರ್ಧನ್ ಅಭಿನಂದಿಸಿದರು.ಬಿಜೆಪಿ ಶಾಸಕರ ಆಕ್ಷೇಪದಿಂದ ಹಂಗಾಮಿ ಸ್ಪೀಕರ್ ಧ್ವನಿ ಮತವನ್ನು ಎರಡು ಬಾರಿ ನಿರ್ವಹಿಸಿದರು. ಅಲ್ಪಮತದ ಆಮ್ ಆದ್ಮಿ ಪಕ್ಷದ ಸರ್ಕಾರ ನಿನ್ನೆ ವಿಶ್ವಾಸ ಮತದ ಅಗ್ನಿಪರೀಕ್ಷೆಯಲ್ಲಿ ಯಶಸ್ವಿಯಾಗಿ ಗೆದ್ದುಬಂದಿದೆ.

ವೆಬ್ದುನಿಯಾವನ್ನು ಓದಿ