ದೇಶಾದ್ಯಂತ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ :ಆರ್‌ಎಸ್‌ಎಸ್

ಶನಿವಾರ, 15 ಫೆಬ್ರವರಿ 2014 (19:55 IST)
PR
PR
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಲೋಕಸಭೆ ಚುನಾವಣೆಗಳಲ್ಲಿ ಮುಸ್ಲಿಮರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ . ಆದರೆ ಆರ್‌ಎಸ್‌ಎಸ್ ಉತ್ತರಪ್ರದೇಶದ 80 ಕ್ಷೇತ್ರಗಳಲ್ಲಿ ಬಿಜೆಪಿ ವಿಜಯವನ್ನು ಖಚಿತಪಡಿಸಲು ಹಿಂದೂಗಳನ್ನು ಒಗ್ಗೂಡಿಸಲು ಮುಂದೆ ಬಂದಿದೆ. ಬಿಜೆಪಿಯ ಸೈದ್ಧಾಂತಿಕ ಬೆನ್ನೆಲುಬು ಆರ್ಎಸ್ಎಸ್ ಹಿಂದೂಗಳ ಏಕತೆ ಗೆ ಕರೆ ನೀಡಿದೆ. ಗುರುವಾರ ಸಂಜೆ, ವಾರಣಾಸಿಯ ನಿವೇದಿತಾ ಶಿಕ್ಷಾ ಸದನದಲ್ಲಿ ನಡೆದ ಆರ್ ಎಸ್ ಎಸ್ ನ ಕಾಶಿ ಪ್ರಾಂತ್ಯದ ನಾಯಕರ ಸಭೆಯಲ್ಲಿ, ಸರ್ ಸಂಚಾಲಕ ಮೋಹನ್ ಭಾಗ್ವತ್ ಸಾಮಾನ್ಯವಾಗಿ ದೇಶಾದ್ಯಂತ ಮತ್ತು ವಿಶೇಷವಾಗಿ ಉತ್ತರ ಪ್ರದೇಶದ "ಹಿಂದೂಗಳ ಮೇಲಿನ ಹಿಂಸೆ" ಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

" ಉತ್ತರಪ್ರದೇಶ ಸೇರಿದಂತೆ ಭಾರತದಾದ್ಯಂತ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ಗಲಭೆಯ ನಂತರ ಮುಜಾಫರ್ ನಗರದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಇದಕ್ಕೆ ಸಾಕ್ಷಿಯಾಗಿವೆ .ಕೋಮು ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆ ಕುರಿತು ಪರಿಶೀಲಿಸುವ ಸೋಗಿನಲ್ಲಿ ಬಹುಸಂಖ್ಯಾತ ಸಮುದಾಯವನ್ನು ಬಲಿಪಶು ಮಾಡಲಾಗಿದೆ.ಕೇಂದ್ರದಲ್ಲಿ ಅಧಿಕಾರಕ್ಕೇರಲಿರುವ ಮುಂದಿನ ಸರ್ಕಾರ ಇಂತಹ ಶಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ಈ ಪ್ರವೃತ್ತಿಯನ್ನು ತಡೆಯಬೇಕು " ಎಂದು ಭಾಗವತ್ ಹೇಳಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ದುರುದ್ದೇಶದ ಹಿತಾಸಕ್ತಿಗಳಿಗಾಗಿ ಹಿಂದೂಗಳನ್ನು ಒಡೆಯುತ್ತಿದ್ದಾರೆ. ಹಿಂದೂಗಳನ್ನು ಒಡೆಯುವ ಉದ್ದೇಶದಿಂದ ಜೈನ ಸಮುದಾಯವನ್ನು 'ಅಲ್ಪಸಂಖ್ಯಾತ' ಸಮುದಾಯಗಳ ಪಟ್ಟಿಗೆ ಸೇರಿಸಲಾಗಿದೆ. ನಮಗೆಲ್ಲಾ ತಿಳಿದಿರುವಂತೆ ಜೈನ್ ಧರ್ಮ ಹಿಂದೂ ಧರ್ಮದ ಒಂದು ಭಾಗವಾಗಿದೆ. ಜೈನ ಸಮುದಾಯದ ಬುದ್ಧಿಜೀವಿಗಳು 'ಅಲ್ಪಸಂಖ್ಯಾತ' ವರ್ಗದ ಪಟ್ಟಿಯಲ್ಲಿ ಇರಲು ಬಯಸುವುದಿಲ್ಲ, "ಎಂದು ಭಾಗ್ವತ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ