ದೇವಯಾನಿಗೆ ಅವಮಾನ ಮಾಡಲು ಅಮೆರಿಕದ ಷಡ್ಯಂತ್ರ ಬಯಲು

ಗುರುವಾರ, 19 ಡಿಸೆಂಬರ್ 2013 (19:02 IST)
PR
PR
ನವದೆಹಲಿ: ಭಾರತದ ರಾಜತಾಂತ್ರಿಕರಾಗಿದ್ದ ದೇವಯಾನಿ ಕೈಗೆ ಕೋಳ ಹಾಕಿ, ವಿವಸ್ತ್ರಗೊಳಿಸಿ ಮಾದಕವ್ಯಸನಿಗಳ ಕೋಣೆಯಲ್ಲಿ ಕೂಡಿ ಹಾಕಿ ಅವಮಾನ ಮಾಡಿದ ಘಟನೆಗೆ ಕಳೆದ ಏಳು ತಿಂಗಳಿಂದ ಅಮೆರಿಕ ಷಡ್ಯಂತ್ರ ನಡೆಸಿದ ಸಂಚು ಬಯಲಾಗಿದೆ. ದೇವಯಾನಿಗೂ ಮತ್ತು ಅವಳ ಮನೆಕೆಲಸದ ಸೇವಕಿ ಸಂಗೀತಾ ರಿಚರ್ಡ್ ನಡುವೆ ಸಂಬಳದ ವಿಚಾರವಾಗಿ ಮೈಮನಸ್ಯವಿತ್ತು. ಸಂಗೀತಾ ರಿಚರ್ಡ್ ಮನೆಯಿಂದ ಒಂದು ದಿನ ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಾಳೆ. ಒಂದು ತಿಂಗಳಾದ ಮೇಲೆ ದೇವಯಾನಿಗೆ ಒಂದು ಅನಾಮೇಧಯ ಫೋನ್ ಕರೆ ಬರುತ್ತದೆ. ಮನೆಗೆಲಸದವಳ ಸಮಸ್ಯೆ ಬಗೆಹರಿಸ್ತೀನಿ ಎಂದು ಅನಾಮಧೇಯ ಕರೆಯಲ್ಲಿ ಒಂದು ಬೇಡಿಕೆಯನ್ನು ಇಡಲಾಗುತ್ತದೆ.

ಆಗ ಸಂಗೀತಾ ರಿಚರ್ಡ್ ವಿರುದ್ಧ ದೇವಯಾನಿ ದೆಹಲಿ ನ್ಯಾಯಾಲಯದಲ್ಲಿ ದೂರನ್ನು ನೀಡುತ್ತಾಳೆ. ನಂತರ ಸಂಗೀತಾ ಪಾಸ್‌ಪೋರ್ಟ್ ಕೂಡ ರದ್ದಾಗುತ್ತದೆ. ಈ ಬಗ್ಗೆ ಅಮೆರಿಕಾ ರಾಯಭಾರ ಕಚೇರಿಗೆ ಭಾರತದ ವಿದೇಶಾಂಗ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಸಂಗೀತಾ ರಿಚರ್ಡ್, ಫಿಲಿಪ್ ರಿಚರ್ಡ್ ಮತ್ತು ಇಬ್ಬರು ಮಕ್ಕಳು ಡಿ.10ರಂದು ಅಮೆರಿಕಾಕ್ಕೆ ಹೋಗುತ್ತಾರೆ. ದೇವಯಾನಿ ಬಂಧನಕ್ಕಿಂತ ಎರಡು ದಿನ ಮುಂಚೆ ಸಂಗೀತಾ ರಿಚರ್ಡ್ ಮತ್ತು ಗಂಡ ಅಮೆರಿಕಕ್ಕೆ ಹಾರ್ತಾರೆ. ಆದರೆ ಎರಡು ದಿನಗಳ ನಂತರ ದೇವಯಾನಿಯನ್ನು ನ್ಯೂಯಾರ್ಕ್ ಪೊಲೀಸರು ಬಂಧಿಸುತ್ತಾರೆ.

ಆದರೆ ವಿದೇಶಾಂಗ ಇಲಾಖೆ ಎಚ್ಚರಿಕೆ ನೀಡಿದ್ರೂ ಸಂಗೀತಾ, ಗಂಡ, ಮಕ್ಕಳಿಗೆ ದಿಢೀರನೇ ವೀಸಾ ಕೊಟ್ಟು ಕರೆಸಿಕೊಂಡಿದ್ದನ್ನು ನೋಡಿದರೆ ಇದೊಂದು ಷಡ್ಯಂತ್ರ ಎನಿಸದೇ ಇರದು.

ವೆಬ್ದುನಿಯಾವನ್ನು ಓದಿ