ದೇಶದ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ: ಪ್ರಣಬ್

ಶುಕ್ರವಾರ, 5 ಅಕ್ಟೋಬರ್ 2012 (12:03 IST)
PTI
ಪ್ರಸ್ತುತ ದೇಶದ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ. ಕ್ಷಿಪ್ರಗತಿಯಲ್ಲಿ ನಿಶ್ಚಲ ಹಾದಿಗೆ ಮರಳಲಿದೆ ಎಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಗುರುವಾರ ಆಶಯ ವ್ಯಕ್ತಪಡಿಸಿದ್ದಾರೆ.

ಇಂಡಿಯಾ ಕೆಮ್‌ 2012 ವಿಚಾರ ಸಂಕಿರಣ ಉದ್ಘಾಟಿಸಿ ಅವರಿಲ್ಲಿ ಮಾತನಾಡುತ್ತಿದ್ದರು.

ಉತ್ಪಾದನಾ ರಂಗದ ಪಾಲಿನಲ್ಲಿ 2025ರೊಳಗೆ ಪ್ರಸಕ್ತ 16ಶೇ. ಮಟ್ಟದಲ್ಲಿರುವ ಜಿಡಿಪಿ 25 ಶೇ. ಏರಿಕೆಯಾಗಲಿದೆ ಮತ್ತು 2022ರೊಳಗೆ ಉತ್ಪಾದನಾ ಕ್ಷೇತ್ರದಲ್ಲಿ 100 ಮಿಲಿಯನ್‌ ಹೆಚ್ಚುವರಿ ಉದ್ಯೋಗ ಸೃಷ್ಟಿಯನ್ನು ನಮ್ಮ ರಾಷ್ಟ್ರೀಯ ಉತ್ಪಾದನಾ ನೀತಿಯಲ್ಲಿ ಗ್ರಹಿಸಲಾಗಿದೆ. ಈ ಪ್ರಯತ್ನದಲ್ಲಿ ರಾಸಾಯನಿಕ ರಂಗ ಬಹು ಪ್ರಾಮುಖ್ಯ ಪಾತ್ರ ವಹಿಸುತ್ತದೆ. ಪ್ರಸ್ತುತ ಸಿದ್ಧಪಡಿಸುತ್ತಿರುವ ರಾಷ್ಟ್ರೀಯ ರಾಸಾಯನಿಕ ನೀತಿಯಲ್ಲಿ ಈ ಗುರಿ ಸಾಧನೆಗೆ ಅನುಕೂಲತೆಗಳನ್ನು ಸೇರ್ಪಡೆಗೊಳಿಸುವುದಾಗಿ ಅವರು ಹೇಳಿದರು.

ವಾರ್ಷಿಕ ವ್ಯವಹಾರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಪ್ರಸಕ್ತ ವಿನಿಯೋಗಿಸುವ 1-2 ಶೇ. ಭಾಗವನ್ನು ಶೇ 5-6ಕ್ಕೆ ಹೆಚ್ಚಿಸಲು ರಾಸಾಯನಿಕ ಉದ್ಯಮಗಳಿಗೆ ಮುಖರ್ಜಿ ಕರೆ ನೀಡಿದರು.

ರಾಸಾಯನಿಕ ಉದ್ಯಮಗಳ ಗುರಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿರುವ ಹೊಸ ಉತ್ಪನ್ನಗಳನ್ನು ತರುವುದಾಗಿರಬೇಕು. ಇದಕ್ಕಾಗಿ ಸರಕಾರ ಕೆಲವು ಸಕಾರಾತ್ಮಕ ಕ್ರಿಯಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.

ವೆಬ್ದುನಿಯಾವನ್ನು ಓದಿ