ದೇಶದ ಯಶಸ್ವಿ ಮಹಿಳಾ ರಾಜಕಾರಣಿಗಳಲ್ಲಿ ಸೋನಿಯಾ ಗಾಂಧಿಗೆ ಅಗ್ರಸ್ಥಾನ: ಸಮೀಕ್ಷೆ

ಶನಿವಾರ, 30 ನವೆಂಬರ್ 2013 (13:00 IST)
PTI
ಕೌಟಂಬಿಕ ಜೀವನ ಮತ್ತು ರಾಜಕೀಯ ಜೀವನವನ್ನು ಸಮತೋಲದಿಂದ ಕಾಪಾಡಿಕೊಂಡಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಭಾರತದ ಸ್ಪೂರ್ತಿ ನೀಡುವ ಮಹಿಳಾ ರಾಜಕಾರಣಿಯಾಗಿದ್ದಾರೆ ಎಂದು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.

ವೈವಾಹಿಕ ವಿವರಗಳನ್ನು ನೀಡುವ ಶಾದಿ ಡಾಟ್ ಕಾಮ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ 36.2 ರಷ್ಟು ಜನರು ಸೋನಿಯಾರನ್ನು ಬೆಂಬಲಿಸಿದ್ದಾರೆ. ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಶೇ. 33.6 ರಷ್ಟು ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

ವೃತ್ತಿ ಜೀವನ ಮತ್ತು ಕೌಟಂಬಿಕ ಜೀವನವನ್ನು ಸಮತೋಲನದಿಂದ ಕಾಪಾಡುವ ಭಾರತ ಯಶಸ್ವಿ ಮಹಿಳೆ ಯಾರು ಎನ್ನುವ ಪ್ರಶ್ನೆಗೆ ಇದೀಗ ಉತ್ತರ ದೊರೆತಿದೆ. ಸಮೀಕ್ಷೆಯಲ್ಲಿ ವಿವಿಧ ನಗರಗಳಿಂದ 5100 ಮಹಿಳೆಯರು ಪಾಲ್ಗೊಂಡಿದ್ದರು.

ಕಾರ್ಪೋರೇಟ್ ಕ್ಷೇತ್ರದ ಯಶಸ್ವಿ ಮಹಿಳಾ ಉದ್ಯಮಿಗಳಲ್ಲಿ ರಿಲಯನ್ಸ್‌ನ ನೀತಾ ಅಂಬಾನಿ ಅಗ್ರಸ್ಥಾನದಲ್ಲಿದ್ದು, ಕಿರಣ್ ಮಜುಮ್‌ದಾರ್ ಎರಡನೇ ಸ್ಥಾನ, ಮೂರನೇ ಸ್ಥಾನದಲ್ಲಿ ಐಸಿಐಸಿಐ ಬ್ಯಾಂಕ್ ಅಧ್ಯಕ್ಷೆ ಚಂದಾ ಕೋಚರ್ ಮತ್ತು ಎಕ್ಸಿಸ್ ಬ್ಯಾಂಕ್‌ನ ಶಿಖಾ ಶರ್ಮಾ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲಿ ಯಶಸ್ವಿ ಮಹಿಳೆಯಾಗಿ ಮೇರಿ ಕೋಮ್ (ಶೇ.33.5) ಅಗ್ರಸ್ಥಾನದಲ್ಲಿದ್ದು, ಎರಡನೇ ಸ್ತಾನ ಸೈನಾ ನೆಹ್ವಾಲ್, ಮೂರನೇ ಸ್ಥಾನದಲ್ಲಿ ಸಾನಿಯಾ ಮಿರ್ಜಾ ಮತ್ತು ನಾಲ್ಕನೇ ಸ್ಥಾನದಲ್ಲಿ ಪಿ.ವಿ.ಸಿಂಧು ಸ್ಥಾನ ಪಡೆದಿದ್ದಾರೆ.

ಬಾಲಿವುಡ್ ಕ್ಷೇತ್ರದಲ್ಲಿ ಯಶಸ್ವಿ ಮಹಿಳೆಯಾಗಿ ಸೂಪರ್ ಸ್ಟಾರ್ ಶಾರುಕ್ ಖಾನ್ ಪತ್ನಿ ಗೌರಿ ಖಾನ್ ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ತಾನವನ್ನು ಐಶ್ವರ್ಯ ರೈ, ಮಾಧುರಿ ದೀಕ್ಷಿತ್ ಮತ್ತು ಕಾಜೋಲ್ ಸ್ತಾನ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ