ದೇಶಾದ್ಯಂತ ಸಡಗರ ಸಂಭ್ರಮದ ದೀಪಾವಳಿ ಆಚರಣೆ

ಗುರುವಾರ, 8 ನವೆಂಬರ್ 2007 (14:12 IST)
ಜನತೆ ದೇಶಾದ್ಯಂತ ದೀಪದ ಹಬ್ಬದ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಉತ್ಸಾಹಪೂರಿತವಾದ ಈ ಹಬ್ಬದ ಶುಭಾಷಯಗಳನ್ನು ಪ್ರತಿಯೊಬ್ಬರು ಹಂಚಿಕೊಳ್ಳುತ್ತಿದ್ದಾರೆ.

ತಮಿಳುನಾಡಿನಲ್ಲಿ ದೀಪಾವಳಿಯನ್ನು ಸಾಂಪ್ರದಾಯಿಕವಾಗಿ ಹಾಗೂ ಧಾರ್ಮಿಕವಾಗಿ ಅಲ್ಲಿನ ಜನತೆಯು ಪಟಾಕಿಗಳನ್ನು ಸಿಡಿಸುವ ಮೂಲಕ ಭರ್ಜರಿ ಆಚರಣೆ ಮಾಡಿದರು.

ಹೊಸ ಬಟ್ಟೆಗಳನ್ನು ಉಟ್ಟುಕೊಂಡು ಮನೆಯ ಮುಂದೆ ದೀಪದ ಅಲಂಕಾರಗಳನ್ನು ಮಾಡಿರುವ ದೃಶ್ಯಗಳು ಸಾಮಾನ್ಯವಾಗಿದ್ದು, ದೇವಸ್ಥಾನಗಳಿಗೆ ಭೇಟಿ ನೀಡಿ ದೇವರಿಗೆ ತಮ್ಮ ಭಕ್ತಿಪೂರ್ವಕ ನಮನಗಳನ್ನು ಅರ್ಪಿಸುತ್ತಿದ್ದಾರೆ.

ಆದರೆ, ಪಟಾಕಿಗಳ ಸದ್ದು ಈ ಬಾರಿ ತಮಿಳುನಾಡಿನಲ್ಲಿ ಕಳೆದ ವರ್ಷಕ್ಕಿಂತಲೂ ಶೇ.150 ರಷ್ಟು ಪ್ರಮಾಣ ಕಡಿಮೆಯಾಗಿದೆ. ಆದರೂ ಕೂಡ ಸಡಗರಕ್ಕೇನೂ ಕೊರತೆಯಾಗಿಲ್ಲ.
ಈ ವರ್ಷ ಶೇ.40 ರಷ್ಟು ಪಟಾಕಿ ಮಾರಾಟವು ಕಡಿತಗೊಂಡಿದೆ. ಇದರಲ್ಲಿ ಉಂಟಾದ ದರದ ಏರಿಕೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಶಿವಕಾಸಿ ಪಟಾಕಿ ತಯಾರಕರು ಹೇಳಿದ್ದಾರೆ.

ಆದರೆ, ಹೊಸ ಬಟ್ಟೆ ಖರೀದಿ ಮಾಡುವವರ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗಿದ್ದು, ಹಬ್ಬದ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಯಲ್ಲಿ ತೊಡಗಿದ್ದರು.

ದೀಪದ ಹಬ್ಬ ದೀಪಾವಳಿಗೆ ಬಂಗಾರ ಕೊಳ್ಳುವವರ ಸಂಖ್ಯೆಯು ತೀವ್ರಗೊಂಡಿದ್ದರಿಂದ, ಚಿನ್ನದ ಬೆಲೆಯಲ್ಲಿಯೂ ಕೂಡ ಗಗನಕ್ಕೆ ಏರಿದೆ.

ವೆಬ್ದುನಿಯಾವನ್ನು ಓದಿ