ನಕಲಿ ಪಾಸ್‌ಪೋರ್ಟ್: ಅಬು ಸಲೇಂಗೆ ಏಳು ವರ್ಷ ಜೈಲು ಶಿಕ್ಷೆ

ಗುರುವಾರ, 28 ನವೆಂಬರ್ 2013 (17:44 IST)
PR
PR
ಹೈದರಾಬಾದ್: 2001ರ ನಕಲಿ ಪಾಸ್‌ಪೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಅಬು ಸಲೇಂಗೆ ಹೈದರಾಬಾದ್‌ನ ವಿಶೇಷ ಸಿಬಿಐ ಕೋರ್ಟ್ ಗುರುವಾರ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಕಳೆದ ನವೆಂಬರ್ 18ರಂದು 3ನೇ ವಿಶೇಷ ಕೋರ್ಟ್ ನ್ಯಾಯಾಧೀಶ ಎಂ.ವಿ. ರಮಣ ನಾಯ್ಡು ಭೂಗತ ದೊರೆಯನ್ನು ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೋಷಿ ಎಂದು ಪರಿಗಣಿಸಿತು. ಅಬು ಸಲೇಂ ಆಂಧ್ರದ ಕರ್ನೂಲು ಜಿಲ್ಲೆಯ ನಕಲಿ ಹೆಸರು ಮತ್ತು ನಕಲಿ ವಿಳಾಸದ ಮೂಲಕ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದ.

ನಕಲಿ ಹುಟ್ಟಿದ ದಿನಾಂಕ, ನಿವಾಸದ ಸಾಕ್ಷ್ಯ ತಂದೆಯ ಹೆಸರನ್ನು ಒಳಗೊಂಡ ನಕಲಿ ದಾಖಲೆಗಳನ್ನು ಸಲ್ಲಿಸಿ ರಾಮಿಲ್ ಕಾಮಿಲ್ ಮಲಿಕ್ ಎಂಬ ನಕಲಿ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್‌ಅನ್ನು ಅಬು ಸಲೇಂ ಸಂಪಾದಿಸಿದ್ದ. 2001ರಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳ ಜತೆ ನಂಟಿನಿಂದ ಹೈದರಾಬಾದ್ ರೀಜನಲ್ ಪಾಸ್‌ಪೋರ್ಟ್ ಕಚೇರಿಯಿಂದ ಇದನ್ನು ಪಡೆದುಕೊಂಡಿದ್ದ.

ವೆಬ್ದುನಿಯಾವನ್ನು ಓದಿ