ನಕ್ಸಲ್‌ ಮುಖಂಡರೊಂದಿಗೆ ಸೆಕ್ಸ್‌ನಲ್ಲಿ ಭಾಗಿಯಾಗುವಂತೆ ಒತ್ತಡ ಹೇರಿದ ಪಾಪಿ ತಂದೆ

ಮಂಗಳವಾರ, 1 ಏಪ್ರಿಲ್ 2014 (11:03 IST)
ನಕ್ಸಲ್‌ ನಾಯಕರೊಂದಿಗೆ ಸೆಕ್ಸ್‌ನಲ್ಲಿ ಪಾಲ್ಗೊಳ್ಳುವಂತೆ ತಂದೆ ಮತ್ತು ಚಿಕ್ಕಪ್ಪ ನಿರಂತರವಾಗಿ ಒತ್ತಡ ಹೇರುತ್ತಿದ್ದರು. ನಿರಾಕರಿಸಿದಲ್ಲಿ ಮಲತಾಯಿ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದಳು ಎಂದು ಯುವತಿಯೊಬ್ಬಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ನಗರದ ರೈಲ್ವೆ ನಿಲ್ದಾಣದಲ್ಲಿ ಅಸಹಾಯಕಳಾಗಿ ಕುಳಿತಿದ್ದ ಯುವತಿಯನ್ನು ಟಾಟಾ ಸ್ಟೀಲ್ ರೂರಲ್ ಆಂಡ್ ಡೆವಲಪ್‌ಮೆಂಟ್ ಸೂಸೈಟಿಯ ಕಾರ್ಯಕರ್ತರು ಪ್ರಶ್ನಿಸಿದಾಗ ಆಘಾತಕಾರಿ ಸುದ್ದಿ ಬಹಿರಂಗವಾಗಿತ್ತು. ನಂತರ ಯುವತಿಯನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿತ್ತು.

ಯುವತಿಗೆ ವಿವಾಹವಾಗಿದ್ದರೂ ಪತಿಯೊಂದಿಗೆ ಬಾಳಲು ನಕ್ಸಲೀಯರಾದ ತಂದೆ ಕುಶಾಲ್ ಶರ್ಮಾ, ಮಲತಾಯಿ ಮತ್ತು ಇಬ್ಬರು ಚಿಕ್ಕಪ್ಪಂದಿರಾದ ಸುಬೋಧ್ ಶರ್ಮಾ ಮತ್ತು ಭೂಷಣ್ ಶರ್ಮಾ ವಿರೋಧಿಸುತ್ತಿದ್ದಾರೆ. ನಕ್ಸಲ್‌ ಗುಂಪಿನ ಹಿರಿಯ ನಾಯಕರೊಂದಿಗೆ ಸೆಕ್ಸ್‌ನಲ್ಲಿ ಭಾಗಿಯಾಗುವಂತೆ ಒತ್ತಡ ಹೇರಿದ್ದರು ಎಂದು ಮಹಿಳಾ ಪೊಲೀಸ್ ಠಾಣೆ ಅಧಿಕಾರಿ ಕಾಂತಾ ಕುಮಾರಿ ತಿಳಿಸಿದ್ದಾರೆ.

ತಂದೆಯ ಆದೇಶವನ್ನು ಪಾಲಿಸದಿದ್ದಲ್ಲಿ ಮಲತಾಯಿ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದಳು. ನಿರಂತರ ದೈಹಿಕ ಹಲ್ಲೆ ನಡೆದಿದ್ದರಿಂದ ಮನೆಯನ್ನು ತೊರೆದು ಹೊರಗೆ ಬಂದಿರುವುದಾಗಿ ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ.

ಏತನ್ಮಧ್ಯೆ, ಯುವತಿಯ ತಂದೆ ಮತ್ತು ಇಬ್ಬರು ಚಿಕ್ಕಪ್ಪಂದಿರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ವಿಚಾರಣೆ ನಡೆದು ಸತ್ಯವೆಂದು ಕಂಡುಬಂದಲ್ಲಿ ಮಾತ್ರ ಪ್ರಕರಣ ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ

ವೆಬ್ದುನಿಯಾವನ್ನು ಓದಿ