ನರೇಂದ್ರ ಮೋದಿಗೆ ಎಸ್‌ಪಿಜಿ ಭದ್ರತೆ ನೀಡಲು ಸಾಧ್ಯವಿಲ್ಲ: ಶಿಂಧೆ

ಸೋಮವಾರ, 11 ನವೆಂಬರ್ 2013 (17:27 IST)
PTI
ಉಗ್ರರಿಂದ ಬೆದರಿಕೆಗೆ ಗುರಿಯಾಗಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭದ್ರತೆಗಾಗಿ ಮತ್ತಷ್ಟು ಎನ್‌ಎಸ್‌ಜಿ ಕಮಾಂಡೋಗಳನ್ನು ನೀಡಲಾಗುವುದು. ಆದರೆ, ಎಸ್‌ಪಿಜಿ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.

ದೇಶಾದ್ಯಂತ ಸಂಚರಿಸುತ್ತಿರುವ ನರೇಂದ್ರ ಮೋದಿಯವರ ಭದ್ರತೆಗಾಗಿ ಅಡ್ವಾನ್ಸ್ ಸೆಕ್ಯೂರಿಟಿ ಲೈಸನ್ ಮತ್ತು ಗುಜರಾತ್ ರಾಜ್ಯದ ವಿಶೇಷ ಪೊಲೀಸ್ ವಿಭಾಗ ಹದ್ದಿನ ಕಣ್ಣಿಟ್ಟು ಕಾಯುತ್ತಿವೆ ಎಂದು ತಿಳಿಸಿದ್ದಾರೆ.

ಕಾನೂನಿನಲ್ಲಿ ಅವಕಾಶವಿಲ್ಲವಾದ್ದರಿಂದ ಎಸ್‌ಪಿಜಿ ಭದ್ರತೆ ನೀಡಲು ಸಾಧ್ಯವಿಲ್ಲ. ಹೆಚ್ಚುವರಿ ಎನ್‌ಎಸ್‌ಜಿ ಪಡೆಗಳನ್ನು ನೀಡಲಾಗಿದೆ ಎಂದು ಶಿಂಧೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೋದಿಗೆ ಝ್‌ಡ್ ಕೆಟೆಗೆರಿ ಭದ್ರತೆಯನ್ನು ಒದಗಿಸಲಾಗಿದ್ದು, ಎನ್‌ಎಸ್‌ಜಿ ವಿಭಾಗದ ಬ್ಲ್ಯಾಕ್ ಕ್ಯಾಟ್ ಕಮಾಂಡೋಗಳನ್ನು ನೀಡಲಾಗಿದೆ. 12ಕ್ಕೂ ಹೆಚ್ಚಿನ ಕಮಾಂಡೋಗಳು ಪ್ರತಿ ಕ್ಷಣ ಭದ್ರತೆ ಒದಗಿಸುತ್ತಿರುತ್ತಾರೆ ಎಂದು ಸಚಿವ ಶಿಂಧೆ ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ