ನರೇಂದ್ರ ಮೋದಿಗೆ ಬಹಿಷ್ಕಾರ ಹಾಕುವಂತೆ ಮುಸ್ಲಿಂ ಸಂಘಟನೆಗಳ ಫತ್ವಾ

ಶುಕ್ರವಾರ, 30 ಆಗಸ್ಟ್ 2013 (13:08 IST)
PTI
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮುಸ್ಲಿಮರನ್ನು ಓಲೈಸುವ ತಂತ್ರಗಳಿಗೆ ಮಾರುಹೋಗದಿರಲು ನಿರ್ಧರಿಸಿದ್ದು, ಚುನಾವಣೆಯಲ್ಲಿ ಮತಗಳನ್ನು ಪಡೆಯಲು ಮುಸ್ಲಿಮರ ಓಲೈಕೆಯಲ್ಲಿ ತೊಡಗಿದ್ದಾರೆ. ರಾಜ್ಯದ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮೋದಿ ಆತ್ಮಿಯ ವಲಯದಲ್ಲಿ ಸ್ಥಾನಪಡೆದಿರುವ ಸೂಫಿ ಮೆಹಬೂಬ್ ಅಲಿ ಚಿಸ್ತಿ ಸಭೆಗಳನ್ನು ಬಹಿಷ್ಕರಿಸುವಂತೆ ಮತ್ತು ಸಾಮಾಜಿಕವಾಗಿ ಕೂಡಾ ದೂರವಿಡುವಂತೆ ಮುಸ್ಲಿಂ ಸಂಘಟನೆಗಳು ಫತ್ವಾ ಹೊರಡಿಸಿವೆ.

ಕಳೆದ ಎರಡು ವರ್ಷಗಳ ಹಿಂದೆ ನರೇಂದ್ರ ಮೋದಿ, ರಾಜ್ಯದಾದ್ಯಂತ ಸದ್ಭಾವನಾ ಮಿಷನ್ ಅಂಗವಾಗಿ ಆಯೋಜಿಸಿದ ಸಭೆಯಲ್ಲಿ ಸೂಫಿ ಮೆಹಬೂಬ್ ಅಲಿ ಚಿಸ್ತಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

ಚಿಸ್ತಿ ತಾನು ಬರೆದ ತಾಜಿನೆ ಸಜ್ದಾ ಜಾಯಜ್ ಹೈ ಎನ್ನುವ ಪುಸ್ತಕದಲ್ಲಿ ಮುಸ್ಲಿಮ ಸಮುದಾಯವನ್ನು ಒಡೆಯಲು ಪ್ರಯತ್ನಿಸಿದ್ದಾರೆ. ಬಿಜೆಪಿಯೊಂದಿಗೆ ಶಾಮೀಲಾಗಿ ಅಕ್ರಮ ಆಸ್ತಿ ಮತ್ತು ವಹಿವಾಟು ಒಪ್ಪಂದಗಳನ್ನು ಪಡೆಯಲು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿ, ಸೂರತ್ ಮತ್ತು ಭಾರೂಚ್ ಜಿಲ್ಲೆಗಳಲ್ಲಿರುವ 19 ಮೌಲ್ವಿಗಳು ಚಿಸ್ತಿ ವಿರುದ್ಧ ಫತ್ವಾ ಹೊರಡಿಸಿದ್ದಾರೆ.

ಮುಸ್ಲಿಮ್ ಮೌಲ್ವಿಗಳ ಆರೋಪಗಳನ್ನು ತಳ್ಳಿಹಾಕಿದ ಚಿಸ್ತಿ, ಇದೊಂದು ಕಾಂಗ್ರೆಸ್ ನಾಯಕರ ರಾಜಕೀಯ ಸಂಚು. ಸಮುದಾಯಕ್ಕೆ ನೋವಾಗುವಂತಹ ಹೇಳಿಕೆ ನೀಡಬಾರದು ಎಂದು ಚುನಾವಣೆ ಆಯೋಗ ವಿಪಕ್ಷಗಳ ನಾಯಕರಿಗೆ ಎಚ್ಚರಿಸಿದೆ ಎಂದು ತಿಳಿಸಿದ್ದಾರೆ.

ಸೂರತ್ ನಗರದಲ್ಲಿರುವ ಅತ್ಲಾದಾರಾ ದರ್ಗಾದ ಮೌಲ್ವಿಯಾಗಿದ್ದ ಸೂಫಿ ಮೆಹಬೂಬ್ ಅಲಿ ಚಿಸ್ತಿಯವರನ್ನು ಲೋಕಸಭಾ ಚುನಾವಣೆಯಲ್ಲಿ ಬಳಸಿಕೊಳ್ಳಲು ನರೇಂದ್ರ ಮೋದಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಲ್ಲಿ ಕಾರ್ಯದರ್ಶಿ ಸ್ಥಾನ ನೀಡುವಂತೆ ಶಿಫಾರಸ್ಸು ಮಾಡಿದ್ದಾರೆ ಎಂದು ಮುಸ್ಲಿಂ ಸಂಘಟನೆಗಳು ಕಿಡಿಕಾರಿವೆ.

ವೆಬ್ದುನಿಯಾವನ್ನು ಓದಿ