ನರೇಂದ್ರ ಮೋದಿ, ಬಿಜೆಪಿ ನಿಷ್ಠೆ ಮುಕೇಶ್ ಅಂಬಾನಿಗೋ ಅಥವಾ ದೇಶಕ್ಕೋ: ಆಮ್ ಆದ್ಮಿ ಪ್ರಶ್ನೆ

ಶುಕ್ರವಾರ, 14 ಫೆಬ್ರವರಿ 2014 (15:47 IST)
PTI
ರಿಲಯನ್ಸ್ ಗ್ಯಾಸ್ ದರ ಏರಿಕೆ ಕುರಿತಂತೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಯಾಕೆ ಮೌನವಾಗಿದ್ದಾರೆ? ಮೋದಿ ಮತ್ತು ಬಿಜೆಪಿಯ ನಿಷ್ಠೆ ದೇಶಕ್ಕೋ ಅಥವಾ ಅಂಬಾನಿಗೋ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಅಶುತೋಶ್ ಪ್ರಶ್ನಿಸಿದ್ದಾರೆ.

ರಿಲಯನ್ಸ್ ದರ ಏರಿಕೆಯ ಬಗ್ಗೆ ಬಿಜೆಪಿ, ಮೋದಿ ಮತ್ತು ಅರುಣ್ ಜೇಟ್ಲಿ ಚಕಾರವೆತ್ತುತ್ತಿಲ್ಲ. ಚುನಾವಣೆಗಾಗಿ ಮುಕೇಶ್ ಅಂಬಾನಿಯಿಂದ ಹಣದ ದೇಣಿಗೆ ಪಡೆಯಲು ಸಂಚು ರೂಪಿಸಿರಬಹುದು. ಇಲ್ಲವಾದಲ್ಲಿ ದರ ಏರಿಕೆಯ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ದೆಹಲಿಯ ಗವರ್ನರ್ ನಜೀಬ್ ಜುಂಗ್ ಕೂಡಾ ಮುಕೇಶ್ ಅಂಬಾನಿಯವರೊಂದಿಗೆ ಯಾವ ರೀತಿ ಸಂಬಂಧ ಹೊಂದಿದ್ದಾರೆ ಎನ್ನುವುದನ್ನು ಯಾಕೆ ಬಹಿರಂಗಪಡಿಸುತ್ತಿಲ್ಲ ಎಂದು ಆಮ್ ಆದ್ಮಿ ಕಿಡಿಕಾರಿದೆ.

ದೆಹಲಿಯ ಗವರ್ನರ್ ಜುಂಗ್ ಈ ಹಿಂದೆ ಲಂಡನ್‌ನಲ್ಲಿ ಅಂಬಾನಿಯವರ ರಿಲಯನ್ಸ್ ಕಂಪೆನಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಜುಂಗ್ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಯಾಕೆ ಬಹಿರಂಗಪಡಿಸಿಲ್ಲ ಎಂದು ಆಮ್ ಆದ್ಮಿ ಮುಖಂಡ ಅಶುತೋಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ