ನರೇಂದ್ರ ಮೋದಿ ರಾಹುಲ್‌ಗಿಂತ ಹೆಚ್ಚು ಜನಪ್ರಿಯ: ಅಮೆರಿಕದ ಸಮೀಕ್ಷೆ ಬಯಲು

ಶುಕ್ರವಾರ, 14 ಮಾರ್ಚ್ 2014 (14:45 IST)
ವಾಷಿಂಗ್ಟನ್: ಭಾರತೀಯ ಮತದಾರರಲ್ಲಿ ಶೇ. 60ಕ್ಕಿಂತ ಹೆಚ್ಚು ಜನರು ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯತ್ತ ಒಲವು ತೋರಿದ್ದಾರೆ. ಶೇ. 20ಕ್ಕಿಂತ ಕಡಿಮೆ ಮತದಾರರು ಕಾಂಗ್ರೆಸ್‌ಗೆ ಬೆಂಬಲಿಸಿದ್ದಾರೆ. ನಿನ್ನೆ ಬಿಡುಗಡೆಯಾದ ಅಮೆರಿಕದ ಸಮೀಕ್ಷೆಯೊಂದರಲ್ಲಿ ಇದು ಬಹಿರಂಗವಾಗಿದೆ.ಶೇ. ಮೂರನೇ ಒಂದಕ್ಕಿಂತ ಹೆಚ್ಚು ಜನರು ಸರ್ಕಾರವನ್ನು ಮುನ್ನಡೆಸಲು ಕಾಂಗ್ರೆಸ್ ಬದಲಿಗೆ ಬಿಜೆಪಿಗೆ ಒಲವು ತೋರಿದೆ ಎಂದು ಪಿವ್ ರಿಸರ್ಚ್ ತಿಳಿಸಿದೆ.ಪ್ರತಿಯೊಂದು ಪಕ್ಷವು ಗೆಲ್ಲುವ ಸೀಟುಗಳ ಸಂಖ್ಯೆಯನ್ನು ಸಮೀಕ್ಷೆ ಬಿಂಬಿಸಿಲ್ಲವಾದರೂ, ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ರಾಹುಲ್ ಗಾಂಧಿ ಅವರಿಗಿಂತ ಹೆಚ್ಚು ಜನಪ್ರಿಯರು ಎಂದು ತಿಳಿಸಿದೆ.

PR
PR
ವಾಷಿಂಗ್ಟನ್ ಮೂಲದ ಚಿಂತಕರ ಚಾವಡಿ ಪಿವ್ ಡಿ.7ರಿಂದ ಜನವರಿ 12ರ ನಡುವೆ ಸರಿಸುಮಾರು ಶೇ. 90ರಷ್ಟು ಭಾರತೀಯ ಜನಸಂಖ್ಯೆವುಳ್ಳ ರಾಜ್ಯಗಳು ಮತ್ತು ಪ್ರದೇಶಗಳ ಮತದಾರರ ಯಾದೃಚ್ಛಿಕ ಆಯ್ಕೆ ಮಾಡಿ 2,464 ಮತದಾರರನ್ನು ಸಂದರ್ಶನ ಮಾಡಿತು.ಸಮೀಕ್ಷೆಯ ಪ್ರಕಾರ,ಮೂರನೇ ಒಂದಕ್ಕಿಂತ ಕಡಿಮೆ ಭಾರತೀಯರು ಇಂದಿನ ಭಾರತದ ಸ್ಥಿತಿಗತಿ ಬಗ್ಗೆ ತೃಪ್ತರಾಗಿದ್ದರು.10 ಭಾರತೀಯರ ಪೈಕಿ 6ಕ್ಕಿಂತ ಹೆಚ್ಚು ಭಾರತೀಯರು ಬಿಜೆಪಿ ಸರ್ಕಾರ ನಡೆಸುವುದಕ್ಕೆ ಒಲವು ತೋರಿದರು. 10ರಲ್ಲಿ 2ರಷ್ಟು ಜನರು ಮಾತ್ರ ಆಡಳಿತ ಕಾಂಗ್ರೆಸ್ ಆಯ್ಕೆ ಮಾಡಿದರು.

ಉಳಿದ ಪಕ್ಷಗಳಿಗೆ ಸಾರ್ವಜನಿಕರ ಶೇ. 12ರಷ್ಟು ಬೆಂಬಲವಿತ್ತು. ಬಿಜೆಪಿಗೆ ಬೆಂಬಲವು ವಿವಿಧ ವಯೋಮಾನಗಳಲ್ಲಿ ಸಂಗತವಾಗಿದ್ದು, ಗ್ರಾಮೀಣ(ಶೇ.64) ಮತ್ತು ನಗರ(ಶೇ. 60) ಭಾರತೀಯರ ನಡುವೆ ಬಹುಮಟ್ಟಿಗೆ ಸಮಾನವಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ಉತ್ತರದ ರಾಜ್ಯಗಳಾದ ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಹರ್ಯಾಣ, ಪಂಜಾಬ್ ಮತ್ತು ದೆಹಲಿ ಜನಸಂಖ್ಯೆ 400 ದಶಲಕ್ಷಕ್ಕಿಂತ ಹೆಚ್ಚಾಗಿದ್ದು, ಬಿಜೆಪಿಗೆ ಹೆಚ್ಚು ಬೆಂಬಲಿಸುತ್ತಾರೆ.

PR
PR
ಅವರ ಪೈಕಿ ಶೇ. 74ರಷ್ಟು ಬಿಜೆಪಿಗೆ ಒಲವು ತೋರಿದ್ದಾರೆ. ಮಹಾರಾಷ್ಟ್ರ, ಚತ್ತೀಸ್‌ಗಢ ಮತ್ತು ಗುಜರಾತಿನಲ್ಲಿ ಬಿಜೆಪಿಗೆ ದುರ್ಬಲ ಬೆಂಬಲವಿದ್ದು, ಸರಿಸುಮಾರಶೇ. 54ರಷ್ಟಿದೆ.ಉದ್ಯೋಗಾವಕಾಶಗಳ ಸೃಷ್ಟಿಗೆ, ಭಯೋತ್ಪಾದನೆ ನಿಗ್ರಹಕ್ಕೆ ಮತ್ತು ಭ್ರಷ್ಟಾಚಾರ ನಿವಾರಣೆಗೆ ಬಿಜೆಪಿ ಕಾಂಗ್ರೆಸ್‌ಗಿಂತ ಹೆಚ್ಚು ಯಶಸ್ವಿಯಾಗುತ್ತೆಂಬ ವಿಶ್ವಾಸ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ