ನೇಣುಕುಣಿಕೆಯಿಂದ ಪಾರಾದ ದೆಹಲಿ ಬಾಂಬ್ ಸ್ಫೋಟದ ಆರೋಪಿ ಭುಲ್ಲಾರ್

ಸೋಮವಾರ, 31 ಮಾರ್ಚ್ 2014 (11:11 IST)
PR
PR
ನವದೆಹಲಿ: 1993ರ ದೆಹಲಿ ಬಾಂಬ್ ಸ್ಫೋಟದ ಆರೋಪಿ ದೇವೇಂದ್ರ ಭುಲ್ಲಾರ್ ಅವರ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಲಾಗಿದೆ. 1993ರಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಕಚೇರಿ ಎದುರು ಭುಲ್ಲಾರ್ ಕಾರ್ ಬಾಂಬ್ ಸ್ಫೋಟಿಸಿದ್ದ. ನ್ಯಾಯಾಲಯದಲ್ಲಿ ದೋಷಿ ಎಂದು ಸಾಬೀತಾದ ಬಳಿಕ ಅವನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ಭುಲ್ಲಾರ್ ಕ್ಷಮಾದಾನ ಅರ್ಜಿಯಲ್ಲಿ ವಿಳಂಬವಾದ ಕಾರಣ ಮತ್ತು ಭುಲ್ಲಾರ್ ಮಾನಸಿಕ ಅಸ್ವಸ್ಥನಾಗಿ ಬಳಲುತ್ತಿರುವ ಹಿನ್ನೆಲೆಯಲ್ಲಿ ಅವನಿಗೆ ನೀಡಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂಕೋರ್ಟ್ ಮಾರ್ಪಡಿಸಿ ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದೆ.

ಕ್ಷಮಾದಾನ ಅರ್ಜಿ ಇತ್ಯರ್ಥದಲ್ಲಿ ವಿಳಂಬದಿಂದ ಕೈದಿಗಳು ಸಾಕಷ್ಟು ಮಾನಸಿಕ ಹಿಂಸೆಗೆ ಒಳಪಡುವುದರಿಂದ ಸುಪ್ರೀಂಕೋರ್ಟ್ ಕ್ಷಮಾದಾನ ಅರ್ಜಿ ವಿಳಂಬವಾದ ಅಪರಾಧಿಗಳ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದೆ. ಇದರಿಂದ ಭುಲ್ಲಾರ್ ನೇಣು ಕುಣಿಕೆಯಿಂದ ಪಾರಾಗಿದ್ದಾನೆ.

ವೆಬ್ದುನಿಯಾವನ್ನು ಓದಿ