ಪತಿಯ ಕುಷ್ಠರೋಗ ಗುಣಪಡಿಸಬೇಕಾದ್ರೆ ಬೆತ್ತಲೆಯಾಗಿ ಕೂತ್ಕೋ ಎಂದು ಯುವತಿಗೆ ಸಲಹೆ ನೀಡಿದ ಮೌಲ್ವಿ ಬಂಧನ

ಬುಧವಾರ, 2 ಏಪ್ರಿಲ್ 2014 (15:23 IST)
ಪತಿಯ ಕುಷ್ಠರೋಗವನ್ನು ಗುಣಪಡಿಸಬೇಕಾದ್ರೆ ಮಾಟ ಮಂತ್ರ ಪೂಜೆ ಪೂರ್ಣಗೊಳಿಸಲು ನನ್ನ ಜೊತೆ ಬೆತ್ತಲೆಯಾಗಿ ಕುಳಿತಕೊಳ್ಳಬೇಕು ಎಂದು 25 ವರ್ಷ ವಯಸ್ಸಿನ ಯುವತಿಗೆ ಒತ್ತಾಯಿಸಿದ ಮೌಲ್ವಿಯನ್ನ ಪೊಲೀಸರು ಬಂಧಿಸಿದ್ದಾರೆ.

ಮೌಲ್ವಿ ಮೌಲಾನಾ ಸಯ್ಯದ್ ಆಲಂ ಮತ್ತು ಆತನಿಗೆ ಬೆಂಬಲ ನೀಡಿದ ಮಹಿಳೆ ಹಮೀದಾ ಅಯೂಬ್ ಶೇಖ್(38)‌ಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಶೋಷಣೆಗೆ ಒಳಗಾದ ಯುವತಿಯ ತಾಯಿ ವಿಶ್ರಾಂತ್ ವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳನ್ನು ಡಿಸೆಂಬರ್ 23ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದ್ದು, ಮಸೀದಿಯಲ್ಲಿ 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಮೌಲ್ವಿಯನ್ನು ಆರೋಪದಿಂದಾಗಿ ಹುದ್ದೆಯಿಂದ ಉಚ್ಚಾಟಿಸಲಾಗಿದೆ.

ಪತಿಗೆ ದೆವ್ವ ಹಿಡಿದಿರುವುದರಿಂದ ಅದರಿಂದ ಬಿಡುಗಡೆಗೊಳಿಸಲು ಮೌಲ್ವಿಯ ನೆರವು ಪಡೆಯುವಂತೆ ಆರೋಪಿ ಮಹಿಳೆ ಹಮೀದಾ ಯುವತಿಗೆ ಪ್ರಚೋದಿಸಿದ್ದಳು ಎನ್ನಲಾಗಿದೆ. ಬೆತ್ತಲೆಯಾಗಿ ಪೂಜೆ ಮಾಡಿದ್ರೆ ಸಾಕಷ್ಟು ಹಣ ಸುರಿಯುವುದಲ್ಲದೇ ಪತಿಯ ಕುಷ್ಠರೋಗ ಕೂಡಾ ಗುಣವಾಗುತ್ತದೆ ಎಂದು ಮನವೊಲಿಸಿದ್ದಳು. ಯುವತಿ ಬೆತ್ತಲೆಯಾಗಿ ಕುಳಿತಿರುವಾಗ ಮೌಲ್ವಿ ಆಕೆಯ ದೇಹದ ಮೇಲೆ ಕೈಯಾಡಿಸಿದಾಗ ಆಕ್ರೋಶಗೊಂಡ ಯುವತಿ ತನ್ನ ತಾಯಿಗೆ ಮಾಹಿತಿ ನೀಡಿದ್ದಳು. ಕೂಡಲೇ ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದರಿಂದ ಆರೋಪಿಗಳ ಬಂಧನಕ್ಕೆ ಸಾಧ್ಯವಾಗಿದೆ.

ವೆಬ್ದುನಿಯಾವನ್ನು ಓದಿ